ಬೆಂಗಳೂರು: ನೂತನ ಸರ್ಕಾರ ಘೋಷಣೆ ಮಾಡಿರುವ ಗೃಹಲಕ್ಷ್ಮಿ (Gruhalakshmi) ಯೋಜನೆಯಡಿ ಮಗ ತೆರಿಗೆ (Tax) ಪಾವತಿಸುತ್ತಿದ್ದರೂ ತಾಯಿಯೂ ಯೋಜನೆಯ ಫಲಾನುಭವಿ ಆಗುತ್ತಾಳೆ. ಆದರೆ, ಪತಿ ಟ್ಯಾಕ್ಸ್ ಕಟ್ಟಿದರೆ ಮಾತ್ರ ಆ ಮಹಿಳೆಗೆ ಈ ಯೋಜನೆ ಲಭಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.
ಪತಿ ಮಾತ್ರವಲ್ಲ, ಮಗ ತೆರಿಗೆ ಪಾವತಿಸುತ್ತಿದ್ದರೂ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ಜನರ ಆಕ್ರೋಶದ ನಂತರ ಈ ಹೇಳಿಕೆ ನೀಡಿದ್ದಾರೆ.
ಗಂಡ ಟ್ಯಾಕ್ಸ್ ಕಟ್ಟಿದ್ರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಆದರೆ ಮಗ ಟ್ಯಾಕ್ಸ್ ಪಾವತಿಸುತ್ತಿದ್ದರೂ, ಜಿಎಸ್‍ಟಿ ಪಾವತಿ ಮಾಡುತ್ತಿದ್ದರೂ ತಾಯಿಗೆ ಮಾಸಿಕ 2 ಸಾವಿರ ರೂ. ಸಿಗುತ್ತದೆ ಎಂದು ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.