8ನೇ ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು
ಸೂರತ್ : ಅಪಾರ್ಟ್ ಮೆಂಟ್ ನ ಎಂಟನೇ ಮಹಡಿಯಿಂದ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. 2 ವರ್ಷದ ಮಿಹಿರ್ ದವೆ ಮೃತ ಗಂಡು ಮಗು.
ಮಗುವನ್ನು ಆಟವಾಡಲು ಬಿಟ್ಟು ಪೋಷಕರು ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಮಗು ಆಟವಾಡುತ್ತಾ ಬಾಲ್ಕನಿ ಬಳಿ ಬಂದಿದೆ. ಬಳಿಕ ಬಾಲ್ಕನಿಯ ಕಂಬಿಯ ಮೇಲೆ ಮಗು ಹತ್ತಿ ನಿಂತಿದೆ. ಇದಾದ ಕೆಲವೇ ಸೆಕೆಂಡುಗಳಲ್ಲಿ ಮಗು ಕಳೆಗೆ ಬಿದ್ದಿದೆ.
ಮಗು ಕೆಳಗೆ ಬೀಳುತ್ತಿದ್ದಂತೆ ಜೋರಾಗಿ ಶಬ್ಧ ಬಂದಿದೆ. ಇದನ್ನ ಕೇಳಿ ಅಪಾರ್ಟ್ ಮೆಂಟ್ ನಲ್ಲಿರುವರು ಏನಾಗಿದೆ ಅಂತಾ ಹೊರಗಡೆ ಬಂದು ನೋಡಿದಾಗ ಮಗು ಕೆಳಗಡೆ ಬಿದ್ದಿರುವುದು ಗೊತ್ತಾಗಿದೆ.
ಕೂಡಲೇ ಮಗುವಿನ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಹಾಗೇ 70 ಅಡಿ ಎತ್ತರದಿಂದ ಬಿದ್ದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೇ ಅದಾಗಲೇ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿದೆ.
ಇನ್ನು ಮಗು ಬಾಲ್ಕನಿಯಿಂದ ಕೆಳಗಡೆ ಬೀಳುತ್ತಿರುವ ದೃಶ್ಯಗಳು ಅಪಾರ್ಟ್ಮೆಂಟ್ ನ ಲಾಬಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.









