Tumakur | ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ತುಮಕೂರು : ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ತುಮಕೂರು ಜಿಲ್ಲೆಯ ಗದ್ದಿಗೇರಹಳ್ಳಿಯಲ್ಲಿ ನಡೆದಿದೆ.
ಗ್ರಾಮಕ್ಕೆ ಸರಬರಾಜು ಆಗುವ ಓವರ್ ಟ್ಯಾಂಕ್ ನ ಪೈಪ್ ಲೈನ್ ಒಡೆದು ಹೋಗಿದೆ. ಈ ನೀರಿಗೆ ಕಲುಷಿತ ನೀರು ಮಿಕ್ಸ್ ಆಗುತ್ತಿದ್ದು, ಆ ನೀರನ್ನ ಸೇವಿಸಿದರ ಪರಿಣಾಮ ಗ್ರಾಮದಲ್ಲಿ ಜನರು ತೀವ್ರ ಅಸ್ವಸ್ಥರಾಗಿದ್ದಾರೆ.
ಗ್ರಾಮದ ಜನರು ಕಳೆದ ಮೂರು ದಿನಗಳಿಂದ ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ. ಹೀಗಾಗಿ ಗ್ರಾಮದಲ್ಲೇ ವೈದ್ಯರ ತಂಡ ಬೀಡುಬಿಟ್ಟು ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದೆ. ಅಲ್ಲದೇ, ಈ ಸಂಬಂಧ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 20 people are sick due to contaminated water in Tumkur