ಹಾಸಿಗೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ತಂದೆ ಕೊಲೆ…
ಹಾಸಿಗೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಪಾರ್ಶ್ವವಾಯು ಪೀಡಿತ ತಂದೆಯ ಕತ್ತು ಹಿಸುಕಿ 20 ವರ್ಷದ ಪುತ್ರ ಕೊಲೆ ಮಾಡಿರುವ ಘಟನೆ ದೆಹಲಿಯ ಆನಂದ್ ಪರ್ಬತ್‌ನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನ 45 ವರ್ಷದ ಜಿತೇಂದ್ರ ಶರ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಪುತ್ರ ಸುಮಿತ್ ಸದ್ಯ ಪೊಲೀಸರ ವಶದಲ್ಲಿದ್ದಾನೆ.
ಫೆಬ್ರವರಿ 3 ರಂದು ಈ ಘಟನೆ ನಡೆದಿದೆ. ಜಿತೇಂದ್ರ ಶರ್ಮಾ ಅವರ ಪತ್ನಿ ಶ್ವೇತಾ ಚೌಹಾಣ್ ರಾತ್ರಿ 9 ಗಂಟೆಗೆ ಪೊಲೀಸ್ ಉಪ ಕಮಿಷನರ್ (ಕೇಂದ್ರ) ಕಛೇರಿಗೆ ಕರೆ ಮಾಡಿ ಹತ್ಯೆಯ ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಇದು ಸಹಜ ಸಾವು ಎಂದು ಭಾವಿಸಲಾಗಿತ್ತು ಆದರೇ ಪತ್ನಿ ಶ್ವೇತಾ ಚೌಹಣ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಶರ್ಮಾ ಅವರ ದೇಹವನ್ನು ಡಾ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಸ್ಥಳಾಂತರಿಸಿ ಫೆಬ್ರವರಿ 4 ರಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ವೈದ್ಯರು ಪೊಲೀಸರಿಗೆ ಮಾಹಿತಿ ನಿಡಿದ್ದು, ಇದು ಸಾವು ಸಹಜವಲ್ಲ ಕೊಲೆ ಎಂದು ತೋರುತ್ತದೆ ಎಂದು ಹೇಳಿದ್ದರು. ಆನಂದ್ ಪರ್ಬತ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಯ ಸಮಯದಲ್ಲಿ, ಪೊಲೀಸ್ ತಂಡವು ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ನೆರೆಹೊರೆಯವರ ಹೇಳಿಕೆ ಸಂಗ್ರಹಿಸಿದೆ. ವಿಚಾರಣೆ ವೇಳೆ, ಸುಮಿತ್ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದು, ತನ್ನ ತಾಯಿ ಬಹಳ ಹಿಂದೆಯೇ ಅವರನ್ನ ತೊರೆದಿದ್ದರಿಂದ ತಾನು ಮತ್ತು ತನ್ನ ತಂದೆ ಒಟ್ಟಿಗೆ ವಾಸಿಸುತ್ತಿದ್ದೇವೆ. ತಂದೆ ಪಾರ್ಶ್ವವಾಯು ಪೀಡಿತರಾಗಿದ್ದು, ಅವರನ್ನ ಒಬ್ಬರೇ ನೋಡಿಕೊಳ್ಳಬೇಕಾಗಿತ್ತು. “ಘಟನೆಯ ದಿನ, ಬಾಲಕನ ತಂದೆ 11 ಕ್ವಾರ್ಟರ್ ಮದ್ಯ ಸೇವಿಸಿದ್ದರು, ಸಂಜೆ ಹಾಸಿಗೆಯ ಮೇಲೆಯೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರು. ಇದರಿಂದ ಹತಾಶರಾದ ಸುಮಿತ್ ಅವರನ್ನು ಕತ್ತು ಹಿಸುಕಿ ಕೊಂದಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
20-year-old kills paralysed father for urinating in Delhi








