ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ‘ಕಿಂಗ್’ ಚಿತ್ರದ ಮೂಲಕ ಮಗಳು ಸುಹಾನಾ ಖಾನ್ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಮಗಳ ಚೊಚ್ಚಲ ಚಿತ್ರಕ್ಕೆ 200 ಕೋಟಿ ರೂ. ಸುರಿಯಲು ಕಿಂಗ್ ಖಾನ್ ಮುಂದಾಗಿದ್ದಾರೆ.
ಮಗಳ ಮೊದಲ ಚಿತ್ರ ಅದ್ದೂರಿಯಾಗಿರಬೇಕು ಎಂಬ ಕಾರಣಕ್ಕೆ 200 ಕೋಟಿ ರೂ. ಬಜೆಟ್ ನಲ್ಲಿ ಚಿತ್ರ ನಿರ್ಮಿಸಲು ಶಾರುಖ್ ಮುಂದಾಗಿದ್ದಾರೆ. ಈ ಚಿತ್ರವನ್ನು ಸುಜಯ್ ಘೋಶ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ಸಾಗುತ್ತಿವೆ. ಕಲಾವಿದರ ಆಯ್ಕೆ ಕೂಡ ಈಗಾಗಲೇ ನಡೆದಿದೆ ಎನ್ನಲಾಗಿದೆ.
ಪಠಾಣ್’ ಸಿನಿಮಾದಂತೆ ‘ಕಿಂಗ್’ ಸಿನಿಮಾ ಕೂಡ ಸಕ್ಸಸ್ ಕಾಣಲೇಬೇಕು ಎಂದು ಶಾರುಖ್ ಇಂಗಿತ ವ್ಯಕ್ತಪಡಿಸಿದ್ದಾರೆ. ಮೊದಲ ಸಿನಿಮಾದಿಂದಲೇ ಮಗಳು ಗೆಲುವಿನ ಓಟ ಕಾಣಬೇಕು ಎಂಬ ಕಾರಣಕ್ಕೆ ಶಾರುಖ್ ತಮ್ಮ ಒಡೆತನದ ನಿರ್ಮಾಣ ಸಂಸ್ಥೆಯಿಂದಲೇ ಬಿಗ್ ಬಜೆಟ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.