OMG : ಒಂದು ಪ್ಲೇಟ್ ಬಿರಿಯಾನಿಗೆ 20 ಸಾವಿರ ರೂಪಾಯಿನಾ..!
ದುಬೈ: ಬಿರಿಯಾನಿ ಸಹಜವಾಗಿ ಎಲ್ಲರಿಗೂ ಬಹಳ ಇಷ್ವಾಗುವ ಖಾದ್ಯ. ಸಾಮಾನ್ಯವಾಗಿ ಬಿರಿಯಾನಿ 80 ರೂಪಾಯಿಂದ ಶುರುವಾಗಿ 1 ಸಾವಿರ ರೂಪಾಯಿ ಅದಕ್ಕಿಂತಲೂ ಹೆಚ್ಚಿರುತ್ತೆ. ಆದ್ರೆ ದುಬೈನ ರಾಯಲ್ ಗೋಲ್ಡ್ ರೆಸ್ಟೋರೆಂಟ್ ನಲ್ಲಿ ಸಿಗುವ ಈ ಸ್ಪೆಷಲ್ ಬಿರಿಯಾನಿ ಬೆಲೆ ಕೇಳುದ್ರೆ ತಲೆ ತಿರುತ್ತೆ. ಯಾಕಂದ್ರೆ ಈ ಬಿರಿಯಾನಿ ಒಂದು ಪ್ಲೇಟ್ ಗೆ ಬರೋಬ್ಬರಿ 20 ಸಾವಿರ ರೂಪಾಯಿಗಳು. ಈ ಬಿರಿಯಾನಿಯನ್ನ ಆರ್ಡರ್ ಮಾಡಿದರೆ ಇದನ್ನ ತರುವುದಕ್ಕೆ 45 ನಿಮಿಷ ಬೇಕಾಗುತ್ತೆ. ಈ ಬಿರಿಯಾನಿಗೆ ಮೂರು ರೀತಿಯ ಅಕ್ಕಿಯನ್ನು ಹಾಕಿ ತಯಾರಿಸಲಾಗುತ್ತದೆ. ಚಿಕನ್ ಬಿರಿಯಾನಿ ರೈಸ್, ಕೀಮಾ ರೈಸ್ ಮತ್ತು ವೈಟ್ ಕೇಸರಿಯಿಂದ ತಯಾರಿಸಲಾಗುತ್ತದೆ.
ಮನೆಕೆಲಸದಾಕೆಗೆ ಚಿತ್ರಹಿಂಸೆ ಕೊಟ್ಟು ಕೊಟ್ಟು ಕೊಂದೇ ಬಿಟ್ಟಳು ಈ ರಾಕ್ಷಸಿ..!
ಬಿಯಾರಿಯಾನಿ ಜೊತೆಯಲ್ಲಿ ತಟ್ಟೆಯಲ್ಲಿ 3 ಬಗೆಯ ಚಿಕನ್ ಗ್ರಿಲ್, ಮಲೈ ಚಿಕನ್, ರಜಪೂತಾನ ಮುರ್ಗ್ ಸುಲಾ ಮತ್ತು ಚಿಕನ್ ಮೀಟ್ಬಾಲ್, ಬೇಯಿಸಿದ ಬೇಬಿ ಆಲೂ ಹಾಗೂ ಮೊಟ್ಟೆ ಬಿರಿಯಾನಿ ಜೊತೆಯಲ್ಲಿ ತಟ್ಟೆಯಲ್ಲಿರುತ್ತದೆ. ಲ್ಯಾಂಚ್ ಚಾಪ್ಸ್ ಮತ್ತು ಲ್ಯಾಂಬ್ ಸೀಖ್ ಕಬಾಬ್, ಪುದೀನ, ಹುರಿದ ಗೋಡಂಬಿ, ದಾಳಿಂಬೆ ಮತ್ತು ಹುರಿದ ಈರುಳ್ಳಿಂದ ತಟ್ಟೆಯನ್ನು ಆಲಂಕರಿಸಿರುತ್ತಾರೆ. ನಿಹಾರಿ ಸಲಾನ್, ಜೋದ್ಪುರ್ ಸಲಾನ್, ಬಾದಾಮಿ ಸಾಸ್, ದಾಳಿಂಬೆ ರೈತಾ ಬಿರಿಯಾನಿಯೊಂದಿಗೆ ಸಿಗುತ್ತದೆ. ಒಟ್ಟಾರೆ ಬಿರಿಯಾನಿಗೆ 20 ಸಾವಿರ ರೂಪಾಯಿ ಅಂದ್ರೆ ನಿಜಕ್ಕೂ ಶಾಕ್ ಆಗುತ್ತೆ.
VIDEO VIRAL : ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದ ಮಹಿಳೆಯ ಜೀವ ಉಳಿಸಿದ ಮಹಿಳಾ ಕಾನ್ಸ್ಟೇಬಲ್..!
ಥೂ.. ಎಂಥ ಕ್ರೂರಿ ಈಕೆ… ಜಿರಾಫೆಯನ್ನು ಕೊಂದು ಅದರ ಹೃದಯದ ಜೊತೆಗೆ ಫೋಟೋಗೆ ಪೋಸ್..!