ಬುಲ್ಲಿ ಬಾಯಿ ಆಪ್ ಆರೋಪಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ….

1 min read

ಬುಲ್ಲಿ ಬಾಯಿ ಆಪ್ ಆರೋಪಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ….

ಮುಂಬೈ – ಮುಸ್ಲೀಂ ಮಹಿಳೆಯರ ಪೋಟೋಗಳನ್ನ ಆನ್ ಲೈನ್ ನಲ್ಲಿ ಹರಾಜು ಹಾಕುತ್ತಿದ್ದ  ‘ಬುಲ್ಲಿ ಬಾಯಿ’ ಆಪ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ 21 ವರ್ಷದ ವಿಶಾಲ್ ಕುಮಾರ್  ಮುಂಬೈ ಪೊಲೀಸರು ಬಂಧಿಸಿ  ಇಂದು ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣದ ಆರೋಪಿ ವಿಶಾಲ್ ಕುಮಾರ್ ಅವನನ್ನ ಬಾಂದ್ರಾ ಕೋರ್ಟ್ ಜನವರಿ 10 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

 ಜನವರಿ 1 ರಂದು ಬಂದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ನಾವು ಅಪ್ಲಿಕೇಶನ್ ಹೋಸ್ಟಿಂಗ್ ಪ್ಲಾಟ್‌ಫಾರ್ಮ್ ಅನ್ನು ಸಂಪರ್ಕಿಸಿದ್ದೇವೆ ಮತ್ತು ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಅವರ ಉತ್ತರವನ್ನು ಆಧರಿಸಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಹೆಚ್ಚುವರಿ ಸಿಪಿ ಮತ್ತು ದೆಹಲಿ ಪೊಲೀಸ್ ಪಿಆರ್‌ಒ, ಚಿನ್ಮೋಯ್ ಬಿಸ್ವಾಲ್ ತಿಳಿಸಿದ್ದಾರೆ.

 ನನ್ನ ಕಕ್ಷಿದಾರನನ್ನ ಜನವರಿ 10 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ನನ್ನ ಕಕ್ಷಿದಾರನನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ಎಂದು ವಕೀಲ ಆರೋಪಿ ವಿಶಾಲ್ ಕುಮಾರ್ ಪರ ವಕೀಲರಾದ ಡಿ.ಪ್ರಜಾಪತಿ, ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ….

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd