#CSK | ಸೋಲಿನಲ್ಲೂ ಎಂ. ಎಸ್. ಧೋನಿ ದಾಖಲೆ

1 min read
ms-dhoni-confirms-he-will-play-ipl-2023 saaksha tv

ms-dhoni-confirms-he-will-play-ipl-2023 saaksha tv

#CSK | ಸೋಲಿನಲ್ಲೂ ಎಂ. ಎಸ್. ಧೋನಿ ದಾಖಲೆ

ಮುಂಬೈ ಇಂಡಿಯನ್ಸ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಸಿಎಸ್ ಕೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ.

ಮುಂಬೈ ವೇಗದ ಬೌಲಿಂಗ್ ಮುಂದೆ ಮಂಡಿಯೂರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.

ಆದ್ರೆ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ಕ್ರೀಸ್ ನಲ್ಲಿ ಕಚ್ಚಿನಿಂತರು.

ಈ ಪಂದ್ಯದಲ್ಲಿ 33 ಎಸೆತಗಳನ್ನು ಎದುರಿಸಿದ ಧೋನಿ 36 ರನ್ ಗಳನ್ನು ಸಿಡಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ 16 ಓವರ್ ಗಳಲ್ಲಿ 97 ರನ್ ಗಳಿಗೆ ಆಲೌಟ್ ಆಯ್ತು.

ಇನ್ನು ಈ ಗುರಿಯನ್ನ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 33 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

21st-time-ms-dhoni-was-innings-top-scorer-csk saaksha tv
21st-time-ms-dhoni-was-innings-top-scorer-csk saaksha tv

ಆದ್ರೆ ಮುಂಬೈ ಯುವ ಬ್ಯಾಟರ್ ತಿಲಕ್ ವರ್ಮಾ 34 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಪಂದ್ಯದಲ್ಲಿ ಸಿಎಸ್ ಕೆ ಸೋಲನುಭವಿಸಿದರೂ ನಾಯಕ ಧೋನಿ ಅಪರೂಪದ ಸಾಧನೆ ಮಾಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 21ನೇ ಬಾರಿ ಟಾಪ್ ಸ್ಕೋರರ್ ಆಗಿ ನಿಂತಿದ್ದಾರೆ.

ಸಿಎಸ್‌ಕೆ ಪರ ಆಡುತ್ತಿರುವ ಮೂರನೇ ಆಟಗಾರ ಧೋನಿ. ಇದಕ್ಕೂ ಮುನ್ನ ಸುರೇಶ್ ರೈನಾ 33 ಇನ್ನಿಂಗ್ಸ್‌ಗಳಲ್ಲಿ ಮತ್ತು ಫಾಫ್ ಡುಪ್ಲೆಸಿಸ್ 26 ಇನ್ನಿಂಗ್ಸ್‌ಗಳಲ್ಲಿ ಗರಿಷ್ಠ ಸ್ಕೋರರ್ ನಿಂತಿದ್ದರು.

ಮುಂಬೈ ವಿರುದ್ಧ ಸೋತು ಪ್ಲೇಆಫ್‌ನಿಂದ ಹಿಂದೆ ಸರಿದಿರುವ ಸಿಎಸ್‌ಕೆ ತನ್ನ ಮುಂದಿನ ಪಂದ್ಯವನ್ನು ಮೇ 15 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. 21st-time-ms-dhoni-was-innings-top-scorer-csk

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd