ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ಸಿನಿ ಬದುಕಿಗೆ ಈಗ 26 ವರ್ಷ ತುಂಬಿದೆ. ಇದನ್ನು ಸುದೀಪಿಯನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ.
ಟ್ವಿಟರ್ನ #26YearsOfSudeepism ಹ್ಯಾಶ್ಟ್ಯಾಗ್ ಟ್ರೆಂಡ್ ಆಗುತ್ತಿದೆ. ಇತ್ತ ಸಿನಿಮಾ ಸ್ಟಾರ್ ಗಳು ಕೂಡ ಅವರಿಗೆ ವಿಶ್ ಮಾಡುತ್ತಿದ್ದಾರೆ.
1997 ರ ತಾಯವ್ವ ಸಿನಿಮಾ ಮೂಲಕ ಸುದೀಪ್, ಚಂದನವನಕ್ಕೆ ಕಾಲಿಟ್ಟರು. ಇದಾದ ಬಳಿಕ ಪ್ರತ್ಯರ್ಥ, ಸ್ಪರ್ಶ ಸಿನಿಮಾಗಳಲ್ಲಿ ನಟಿಸಿದ್ದರು.
ಆದ್ರೆ ಹುಚ್ಚ ಸಿನಿಮಾ ಸುದೀಪ್ ಗೆ ಸ್ಟಾರ್ ಪಟ್ಟ ತಂದುಕೊಡ್ತು. ಅಲ್ಲಿಂದ ಸುದೀಪ್, ಕಿಚ್ಚ ಸುದೀಪ್ ಅಂತಾನೇ ಖ್ಯಾತಿ ಪಡೆದುಕೊಂಡರು.
ಇದಾದ ಬಳಿಕ ಸಾಕಷ್ಟು ಏರಿಳಿತಗಳನ್ನು ಕಂಡ ಕಿಚ್ಚ, ಪರಭಾಷೆಯಲ್ಲೂ ಮಿಂಚಿದ್ರು.
ಆರ್ ಜಿವಿ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸುದೀಪ್, ಈಗ ಚಿತ್ರದಲ್ಲಿ ವಿಲನ್ ಆಗಿ ಟಾಲಿವುಡ್ ನಲ್ಲಿ ಸ್ಟಾರ್ ಆದ್ರು. ಜೊತೆಗೆ ಪುಲಿ ಮೂಲಕ ತಮಿಳು ಚಿತ್ರರಂಗದಲ್ಲೂ ಶೈನ್ ಆದರು.
ಸುದೀಪ್ ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ಮಾಪಕನಾಗಿ, ಡೈರೆಕ್ಟರ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ.
2006ರಲ್ಲಿ ತೆರೆಗೆ ಬಂದ ‘ಮೈ ಆಟೋಗ್ರಾಫ್’ ಚಿತ್ರವನ್ನು ನಿರ್ದೇಶಿಸಿದ್ದ ಸುದೀಪ್ 2014ರಲ್ಲಿ ತೆರೆಗೆ ಬಂದ ‘ಮಾಣಿಕ್ಯ’ ಸಿನಿಮಾಗೂ ಆಕ್ಷನ್ ಕಟ್ ಹೇಳಿದ್ದರು.