ಬೆಂಗಳೂರು : ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯ ಅವಧಿಯೊಳಗೆ ಒಟ್ಟು 75 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ 2493ಕ್ಕೆ ಒಟ್ಟು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇಂದಿನ 75 ಸೋಂಕಿತರ ಪೈಕಿ 46 ಮಂದಿ ಮಹಾರಾಷ್ಟ್ರದಿಂದ ಮರಳಿದ್ದರೆ, 6 ಮಂದಿ ತಮಿಳುನಾಡಿನಿಂದ ಬಂದಿದ್ದಾರೆ.
ಇಂದು ಉಡುಪಿಯಲ್ಲಿ 29, ಹಾಸನದಲ್ಲಿ 13 ಹಾಗೂ ಬೆಂಗಳೂರಿನಲ್ಲಿ 7 ಜನರಿಗೆ ಸೋಂಕು ತಗುಲಿದೆ. ವಿಜಯಪುರದಲ್ಲಿ 2, ಕಲಬುರಗಿಯಲ್ಲಿ 3, ರಾಯಚೂರಿನಲ್ಲಿ 1, ದಕ್ಷಿಣ ಕನ್ನಡದಲ್ಲಿ 6, ಚಿಕ್ಕಮಗಳೂರಿನಲ್ಲಿ 3, ಚಿತ್ರದುರ್ಗದಲ್ಲಿ 6, ಯಾದಗಿರಿಯಲ್ಲಿ 7 ಪ್ರಕರಣಗಳು ದೃಢಪಟ್ಟಿವೆ.
ಇಂದು ಒಟ್ಟು 28 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ರಾಜ್ಯದಲ್ಲಿ 1635 ಸಕ್ರಿಯ ಪ್ರಕರಣಗಳಿದ್ದು, 47 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು 809 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇನ್ನು ಹಾಸನದಲ್ಲಿ ಒಟ್ಟು 13 ಮಂದಿಯಲ್ಲಿ ಕೊರೊನಾ ಕಾಣಿಸಿದ್ದು, 10 ಮಂದಿಯ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಬೆಂಗಳೂರು ನಗರದಲ್ಲಿ 7 ಮಂದಿಗೆ ಸೋಂಕು ಬಂದಿದ್ದು, ಈ ಪೈಕಿ 6 ಮಂದಿಗೆ 1,240ನೇ ರೋಗಿಯಿಂದ ಬಂದಿದೆ. ದಕ್ಷಿಣ ಕನ್ನಡದಲ್ಲಿ ಮಹಾರಾಷ್ಟ್ರದಿಂದ ಮರಳಿದ 6 ಮಂದಿಗೆ ಸೋಂಕು ಬಂದಿದೆ.
ಯಾದಗಿರಿಯಲ್ಲಿ ಎಲ್ಲ 7 ಮಂದಿ ಮಹಾರಾಷ್ಟ್ರದಿಂದ ಮರಳಿದ್ದಾರೆ. ತಮಿಳುನಾಡಿನಿಂದ ಚಿತ್ರದುರ್ಗಕ್ಕೆ ಮರಳಿದ್ದ 6 ಮಂದಿಗೆ ಕೊರೊನಾ ಬಂದಿದೆ. ಕಲಬರುಗಿಯಲ್ಲಿ ಮೂರು ಮಂದಿಯೂ ಮಹಾರಾಷ್ಟ್ರದಿಂದ ಮರಳಿದ್ದರೆ, ಚಿಕ್ಕಮಗಳೂರಿನಿಂದ ದೆಹಲಿಯಿಂದ ಮರಳಿದ ವ್ಯಕ್ತಿ ಮತ್ತು ಮಹಾರಾಷ್ಟ್ರದಿಂದ ಮರಳಿದ ವ್ಯಕ್ತಿಗೆ ಸೋಂಕು ಬಂದಿದೆ. ವಿಜಯಪುರದಲ್ಲಿ ಪತ್ತೆಯಾದ ಇಬ್ಬರಿಗೂ ಮಹಾರಾಷ್ಟ್ರ ಸಂಪರ್ಕವಿದೆ. ಕಲಬುರಗಿಯ 3 ಮಂದಿಯೂ ಮಹಾರಾಷ್ಟ್ರದಿಂದ ಮರಳಿದ್ದಾರೆ.








