ಹಾಸನದಲ್ಲಿ ಪುರಾತನ ಕಾಲದ 28 ಬೆಳ್ಳಿ ನಾಣ್ಯ ಪತ್ತೆ
ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದ ಕಾಫಿ ತೋಟದಲ್ಲಿ ಪುರಾತನ ಕಾಲದ 28 ಬೆಳ್ಳಿ ನಾಣ್ಯ ಪತ್ತೆಯಾಗಿವೆ.
ಶ್ಯಾಮ್ ಎಂಬುವವರ ತೋಟದಲ್ಲಿ ಮಣ್ಣು ಅಗೆಯುವಾಗ ಕೂಲಿ ಕಾರ್ಮಿಕನಿಗೆ ಬ್ರಿಟಿಷ್ ಕಾಲದ ಒಂದು ರುಪಾಯಿ ಮುಖ ಬೆಲೆಯ ರಾಣಿ ವಿಕ್ಟೋರಿಯಾ ಚಿತ್ರ ಇರುವ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.
ಮಣ್ಣು ಅಗೆಯುವಾಗ ಸಿಕ್ಕಿದ ನಾಣ್ಯಗಳನ್ನು ಹರೀಶ್ ಎಂಬ ಕಾರ್ಮಿಕ, ಮಾಲಿಕನಿಗೆ 9 ನಾಣ್ಯಗಳನ್ನು ನೀಡಿ ಉಳಿದ ನಾಣ್ಯಗಳನ್ನು ಬಚ್ಚಿಟ್ಟುಕೊಂಡಿದ್ದರು.
ಈ ಮಾಹಿತಿ ತಿಳಿದ ಸಕಲೇಶಪುರ ಗ್ರಾಮಾಂತರ ಠಾಣಾ ಪೊಲೀಸರು, ಹರೀಶ್ ಅವರನ್ನು ಬಂಧಿಸಿ ಆತನ ಬಳಿ ಇದ್ದ 19 ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ.