ಭಾರತಕ್ಕೆ ಸೇರಿದ 29 ಪುರಾತನ ವಸ್ತುಗಳನ್ನ ಮರಳಿಸಿದ ಆಸ್ಟ್ರೇಲಿಯಾ
ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ನಡುವೆ ವರ್ಚುವಲ್ ಶೃಂಗಸಭೆ ನಡೆಯಲಿದೆ. ಇದಕ್ಕೂ ಮೊದಲು, ಆಸ್ಟ್ರೇಲಿಯಾವು ಭಾರತಕ್ಕೆ ಅಮೂಲ್ಯವಾದ 29 ಪುರಾತನ ಪ್ರಾಚೀನ ವಿಗ್ರಹಗಳನ್ನ ಹಿಂದುರುಗಿಸಿದೆ. ಇವುಗಳನ್ನ ಪ್ರಧಾನಿ ಮೋದಿ ಸೋಮವಾರ ಪರಿಶೀಲಿಸಿದರು.
ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಯಾದ ನಂತರ ಹಲವು ದೇಶಗಳಿಂದ ಅಮೂಲ್ಯ ಐತಿಹಾಸಿಕ ವಸ್ತುಗಳನ್ನು ತರಿಸಲಾಗುತ್ತಿದೆ. ಇವುಗಳಲ್ಲಿ ಹೆಚ್ಚಿನವು ಪೌರಾಣಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ವಿಗ್ರಹಗಳನ್ನು ಒಳಗೊಂಡಿವೆ. ಆಸ್ಟ್ರೇಲಿಯಾವು 9 ರಿಂದ 10 ನೇ ಶತಮಾನಗಳ ವಿವಿಧ ಅವಧಿಗಳಿಗೆ ಸೇರಿದ 29 ಬೆಲೆಬಾಳುವ ವಸ್ತುಗಳನ್ನು ಹಿಂದಿರುಗಿಸಿದೆ.
ಆಸ್ಟ್ರೇಲಿಯಾದಿಂದ ತಂದ ಅವಶೇಷಗಳಲ್ಲಿ ಶಿವ, ವಿಷ್ಣು ಮತ್ತು ಶಕ್ತಿ ದೇವತೆಯ ಪ್ರತಿಮೆಗಳು ಮತ್ತು ಜೈನ ಸಂಪ್ರದಾಯದ ವಿಗ್ರಹಗಳು ಮತ್ತು ಆಭರಣಗಳು ಸೇರಿವೆ. ಈ 29 ಪುರಾತನ ವಸ್ತುಗಳನ್ನು 6 ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ 29 ಪ್ರಾಚೀನ ವಸ್ತುಗಳು ಮುಖ್ಯವಾಗಿ ಮರಳುಗಲ್ಲು, ಅಮೃತಶಿಲೆ, ಕಂಚು ಮತ್ತು ಹಿತ್ತಾಳೆಯ ಶಿಲ್ಪಗಳು ಮತ್ತು ವರ್ಣಚಿತ್ರಗಳನ್ನು ಒಳಗೊಂಡಿವೆ ಎಂದು PMO ಟ್ವೀಟ್ ಮಾಡಿದೆ. ಈ ಶಿಲ್ಪಗಳು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳಕ್ಕೆ ಸಂಪರ್ಕ ಹೊಂದಿವೆ.
#WATCH | PM Modi inspects the 29 antiquities which have been repatriated to India by Australia. The antiquities range in 6 broad categories as per themes – Shiva and his disciples, Worshipping Shakti, Lord Vishnu and his forms, Jain tradition, portraits and decorative objects. pic.twitter.com/uQiKdlCdtX
— ANI (@ANI) March 21, 2022