ಹರ್ಷಲ್ ಪಟೇಲ್ ಆಲ್ ರೌಂಡ್ ಪ್ರದರ್ಶನ : ಭಾರತಕ್ಕೆ ಜಯ
ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಟೆಸ್ಟ್ ಮ್ಯಾಚ್ ನಲ್ಲಿ ಧೂಳೆಬ್ಬಿಸುತ್ತಿದ್ದರೇ ಮತ್ತೊಂದು ಕಡೆ ಯಂಗ್ ಇಂಡಿಯಾ ಟಿ 20 ಯಲ್ಲಿ ಅಬ್ಬರಿಸಿದೆ.
ಡರ್ಬಿಶೈರ್ ವಿರುದ್ಧ ನಡೆದ ಮೊದಲ ವಾರ್ಮ್ ಅಪ್ ಮ್ಯಾಚ್ ನಲ್ಲಿ ಏಳು ವಿಕೆಟ್ ಗಳ ಅಂತರದಲ್ಲಿ ಜಯ ಸಾಧಿಸಿದ ಯಂಗ್ ಇಂಡಿಯಾ, ನಾರ್ಥಾಂಪ್ಟನ್ ಶೈರ್ ಕ್ಲಬ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ 10 ರನ್ ಗಳಿಂದ ಜಯ ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡಿಕೆ ಬಳಗ, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳನ್ನು ಮಾತ್ರ ಗಳಿಸಿತು.
ಈ ರನ್ ಗಳನ್ನು ಡಿಫೆಂಡ್ ಮಾಡಿಕೊಳ್ಳುವುದರಲ್ಲಿ ಟೀಂ ಇಂಡಿಯಾದ ಬೌಲರ್ ಗಳು ಯಶಸ್ವಿಯಾದರು.
ಟಾಪ್ ಆರ್ಡರ್ ಬ್ಯಾಟರ್ ಗಳು ವಿಫಲವಾಗಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ನಾಯಕ ದಿನೇಶ್ ಕಾರ್ತಿಕ್ ಹಾಗೂ ಹರ್ಷಲ್ ಪಟೇಲ್ ಅದ್ಭುತ ಜೊತೆಯಾಟವಾಡಿದರು.
ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ 34 ರನ್ ಗಳಿಸಿದ್ರೆ, ಹರ್ಷಲ್ ಪಟೇಲ್ 36 ಎಸೆತಗಳಲ್ಲಿ 54 ರನ್ ಗಳಿಸಿದರು.
149 ರನ್ ಗಳ ಗುರಿ ಬೆನ್ನಟ್ಟಿದ ನಾರ್ಥಾಂಪ್ಟನ್ ಶೈರ್ ಕ್ಲಬ್ 19.3 ಓವರ್ ಗಳಲ್ಲಿ 139 ರನ್ ಗಳಿಸಷ್ಟೆ ಶಕ್ತವಾಯ್ತು.
ಭಾರತದ ಪರ ಅರ್ಷದೀಪ್ ಸಿಂಗ್, ಆವೇಶ್ ಖಾನ್, ಹರ್ಷಲ್ ಪಟೇಲ್, ಚಹಲ್ ತಲಾ ಎರಡು ವಿಕೆಟ್ ಪಡೆದರು.
ಪ್ರಸಿದ್ಧ ಕೃಷ್ಣ, ವೆಂಕಟೇಶ್ ಅಯ್ಯರ್ ತಲಾ ಒಂದು ವಿಕೆಟ್ ಪಡೆದರು.