ಚರಿತ್ರೆ ಸೃಷ್ಠಿಸಿದ ಭಾರತ : ದಿನವೊಂದರಲ್ಲಿ ಪ್ರಪಂಚದಲ್ಲೇ ಅತೀ ಹೆಚ್ಚು ಕೇಸ್ ಪತ್ತೆ
ನವದೆಹಲಿ : ಇದೇ ಮೊದಲ ಬಾರಿಗೆ ಕೊರೊನಾ ಪ್ರಕರಣಗಳಲ್ಲಿ ಅಂದ್ರೆ ದಿನವೊಂದರಲ್ಲಿ ಪತ್ತೆಯಾಗುವ ಸೋಂಕಿತರ ಸಂಖ್ಯೆಯಲ್ಲಿ ಭಾರತ ವಿಶ್ವ ದಾಖಲೆ ಬರೆದಿದೆ.
ಮೂರು ಲಕ್ಷಕ್ಕೂ ಅಧಿಕ (3,14,835) ಪ್ರಕರಣಗಳೊಂದಿಗೆ ದಿನವೊಂದರಲ್ಲಿ ಪ್ರಪಂಚದಲ್ಲೇ ಅತೀ ಹೆಚ್ಚು ಸೋಂಕಿತರು ಭಾರತದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಚಿತ್ರವೇನಂದ್ರೆ ಇಲ್ಲಿಯವರೆಗೆ ಅಮೆರಿಕ ಸೇರಿದಂತೆ ವಿಶ್ವದ ಯಾವ ಕೋವಿಡ್ ಪೀಡಿತ ದೇಶಗಳಲ್ಲಿಯೂ ಇಷ್ಟೊಂದು ಕೇಸ್ಗಳು ಒಂದೇ ದಿನದಲ್ಲಿ ವರದಿಯಾಗಿರಲಿಲ್ಲ.
ಆದ್ರೆ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 3,14,835 ಹೊಸ ಕೋವಿಡ್ ಕೇಸ್ ಗಳು ದೃಢಪಟ್ಟಿವೆ.
2,104 ಸಾವು ವರದಿಯಾಗಿದೆ. ಆಕ್ಟಿವ್ ಪ್ರಕರಣಗಳ ಸಂಖ್ಯೆ 22,91,428ಕ್ಕೆ ಹೆಚ್ಚಳವಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,104 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಮೃತಪಟ್ಟವರ ಸಂಖ್ಯೆ 1,84,657ಕ್ಕೆ ಏರಿಕೆಯಾಗಿದೆ.
ಭಾರತದಲ್ಲೀಗ ಸೋಂಕಿತರ ಸಂಖ್ಯೆ 3,14,835 ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 22,91,428ಕ್ಕೆ ಜಿಗಿದಿದೆ.