Delhi : ಅಪಘಾತಕ್ಕೆ ಒಳಗಾದ ಸ್ನೇಹಿತನನ್ನ ಆಸ್ಪತ್ರೆ ಬದಲು ಅಂಡರ್ ಪಾಸ್ ನಲ್ಲಿ ಎಸೆದ ಸ್ನೇಹಿತರು…
ಮೂವರು ಸ್ನೇಹಿತರು ಅಪಘಾತಕ್ಕೆ ಒಳಗಾದ ಸ್ನೇಹಿತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಅಂಡರ್ ಪಾಸ್ ಬಳಿ ಬಿಸಾಡಿ ಹೋಗಿ ಗೆಳತನಕ್ಕೆ ಕಳಂಕ ತಂದಿರುವ ಅಮಾನವೀಯ ಘಟನೆ ದೆಹಲಿಯ ಶಹದಾರಾದಲ್ಲಿ ನಡೆದಿದೆ. ಆಟೋ ರಿಕ್ಷಾ ಪಲ್ಟಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸ್ನೇಹಿತರನ್ನ ಪವನ್, 22, ಬ್ರಿಜ್ ಮೋಹನ್, 22, ಮತ್ತು ಬಾಲಾಪರಾಧಿ ಎಂದು ಗುರುತಿಸಲಾಗಿದೆ-ಎಲ್ಲರೂ ರಾಷ್ಟ್ರ ರಾಜಧಾನಿಯ ಸುಂದರ್ ನಗರಿ ಪ್ರದೇಶದ ನಿವಾಸಿಗಳು. ಪವನ್ ಮತ್ತು ಬ್ರಿಜ್ ಮೋಹನ್ ಅವರ ಜೊತೆಗೆ ಬಾಲಾಪರಾಧಿಯನ್ನೂ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 8 ರಂದು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪೊಲೀಸರಿಗೆ ಸಾವಿನ ಬಗ್ಗೆ ಮಾಹಿತಿ ಬಂದಿದ್ದು, ಜಿಲ್ಮಿಲ್ ಇಂಡಸ್ಟ್ರಿಯಲ್ ಏರಿಯಾದ ಅಂಡರ್‌ಪಾಸ್‌ನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನನ್ನು ನಿತೀಶ್ ಎಂದು ಗುರುತಿಸಲಾಗಿದೆ.
“ಮಾರ್ಚ್ 7-8 ರ ರಾತ್ರಿ ನಿತೀಶ್ ತನ್ನ ಸ್ನೇಹಿತರೊಂದಿಗೆ ಇರುವುದು ಪತ್ತೆಯಾಗಿದೆ. ಇವರು ಪ್ರಯಾಣಿಸುತ್ತಿದ್ದ ಆಟೋ – ರಿಕ್ಷಾ ನಂದ್ ನಾಗ್ರಿ ಪ್ರದೇಶದಲ್ಲಿ ಪಲ್ಟಿಯಾಗಿದೆ. ಗಾಯಗೊಂಡ ನಿತೀಶ್ ನನ್ನ ಅದೇ ಸ್ನೇಹಿತರು ರಿಕ್ಷಾದಲ್ಲಿ ಕರೆದೊಯ್ದಿದ್ದಾರೆ. ಆದರೇ ಆಸ್ಪತ್ರೆಗೆ ಕರೆದೊಯ್ಯುವ ಬದಲು ಅಂಡರ್‌ಪಾಸ್‌ನಲ್ಲಿ ಎಸೆದು ಹೋಗಿದ್ದಾರೆ” ಎಂದು ದೆಹಲಿ ಈಶಾನ್ಯ ಡಿಸಿಪಿ ಜಾಯ್ ಟಿರ್ಕಿ ತಿಳಿಸಿದ್ದಾರೆ. ಸ್ನೇಹಿತರ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
3 men dump friend’s body at Delhi underpass after an accident to avoid hospital, held