ಅಪ್ಪು ಅಗಲಿ 3 ತಿಂಗಳು – ನೆನಪಲ್ಲಿ ಅಶ್ವಿನಿಂದ 500 ಗಿಡಗಳ ದಾನ…
ಕನ್ನಡದ ರಾಜರತ್ನ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 3 ತೀಗಳು ಕಳೆಯುತ್ತಾ ಬಂದಿದೆ. 3 ತಿಂಗಳು ಕಳೆದರೂ ಅವರ ಕುಟುಂಬ ಮತ್ತು ಅಭಿಮಾನಿಗಳ ನೆನಪಲ್ಲಿ ಅವರ ನೆನಪು ಎಳ್ಳಷ್ಟು ಮಾಸಿಲ್ಲ. ಇಂದದು ಪುನೀತ್ ನೆನಪಿಗಾಗಿ ಕುಟುಂಬ 500 ಗಿಡಗಳನ್ನ ಅಭಿಮಾನಿಗಳಿಗೆ ದಾನ ಮಾಡಿದೆ. ಈ ಮೂಲಕ ಪುನೀತ್ ರಾಜ್ ಕುಮಾರ್ ಕುಟುಂಬ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದೆ.
ಪುನೀತ್ ಸಮಾಧಿ ಸ್ಥಳಕ್ಕೆ ಬೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಸಹಿ ತಿನಿಸುಗಳು ಹಾಗು ಅಪ್ಪುಗೆ ಇಷ್ಟವಾದ ಪದಾರ್ಥಗಳನ್ನ ಎಡೆಯಿಟ್ಟಿದ್ದಾರೆ. ಈ ಸಮಯದಲ್ಲಿ ರಾಘವೇಂದ್ರ ರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಗಳು ವಂದಿತಾ ಪುನೀತ್ ಅಕ್ಕಂದಿರಾದ ಲಕ್ಷ್ಮಿ ಪೂರ್ಣಿಮಾ , ವಿನಯ್ ರಾಜ್ ಕುಮಾರ್ ಯುವ ರಾಜ್ ಕುಮಾರ್ ಸೇರಿದಂತೆ ಇಡೀ ‘ಕುಟುಂಬ ಸಮಾಧಿ ಬಳಿ ಸೇರಿತ್ತು…
ಅಪ್ಪು ಹೆಸರಲ್ಲಿ ಬಾದಾಮಿ, ಸೀಬೆ, ಮಾವು, ತೇಗ, ಹಲಸಿನ ಗಿಡ ಸೇರಿ 500 ಗಿಡಗಳನ್ನು ಅಭಿಮಾನಿಗಳಿಗೆ ದಾನವಾಗಿ ನೀಡಿದ್ದಾರೆ. ಪುನೀತ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ನ ವಿಶೇಷ ಪೋಸ್ಟರ್ ಅನ್ನ ಗಣರಾಜ್ಯೋತ್ಸವದ ದಿನ ಬಿಡುಗಡೆ ಮಾಡಲಾತ್ತು. ಚಿತ್ರ ಪುನೀತ್ ಹುಟ್ಟು ಹಬ್ಬದಂದು ಮಾರ್ಚ್ 18 ಕ್ಕೆ ಬಿಡುಗಡೆಯಾಗಲಿದೆ.