ಕಲಬುರಗಿ: 3 ವರ್ಷದ ಬಾಲಕಿ ಮೇಲೆ ವಾಹನ ಹರಿದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಾಲಾ ವಾಹನ (School Bus) ಹರಿದ ಪರಿಣಾಮ 3 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ರಾಜಶೇಖರ್ ಎಂಬುವವರ ಪುತ್ರಿ ಖುಷಿ ಬನ್ನಟ್ಟಿ (3) ಸಾವನ್ನಪ್ಪಿದ ಬಾಲಕಿ.
ಶಾಲಾ ವಾಹನದಲ್ಲಿ ಅಣ್ಣ ಬಂದಿದ್ದಾನೆಂದು ಆತನನ್ನು ಕರೆಯಲು ತಂದೆಯ ಹಿಂದೆ ಖುಷಿ ಹೋಗಿದ್ದಳು. ಆದರೆ ತಂದೆ ಈಕೆ ಬಂದಿರುವುದನ್ನು ಗಮನಿಸಿರಲಿಲ್ಲ. ಅಣ್ಣ ಬಸ್‌ನಿಂದ ಇಳಿದ ನಂತರ ಶಾಲಾ ವಾಹನದ ಚಾಲಕ ಬಸ್ ಹಿಂದೆ ತಿರುಗಿಸಿದ್ದಾನೆ. ಈ ವೇಳೆ ಖುಷಿ ಬಸ್ ನಡಿ ಸಿಲುಕಿದ್ದಾಳೆ. ಆಕೆಯ ತಲೆಯ ಮೇಲೆ ಬಸ್ ಹರಿದಿದೆ. ಹೀಗಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನೆಯ ನಂತರ ಚಾಲಕ ಶ್ರೀಶೈಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.








