ಪ್ಯೊಂಗ್ಯಾಂಗ್: ಪ್ರವಾಹ ತಡೆಗಟ್ಟಲು ವಿಫಲರಾದ ಸುಮಾರು 30 ಸರ್ಕಾರಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿ ಉತ್ತರ ಕೊರಿಯಾದ (North Korea) ನಾಯಕ ಕಿಮ್ ಜಾಂಗ್ ಉನ್ (Kim Jong Un) ಆದೇಶ ಹೊರಡಿಸಿದ್ದಾರೆ ಎಂದು ದಕ್ಷಿಣ ಕೊರಿಯಾ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಚಗಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಭೂಕುಸಿತಗಳು ಹಲವಾರು ಸಾವು-ನೋವುಗಳು ಸಂಭವಿಸಿದ್ದವು. ನೂರಾರು ಸಂಖ್ಯೆಯಲ್ಲಿ ಜನರು ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಹೀಗಾಗಿ ಸ್ವೀಕಾರಾರ್ಹವಲ್ಲದ ಜೀವಹಾನಿಗೆ ಕಾರಣರಾದವರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ಅಧಿಕಾರಿಯನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಇದಷ್ಟೇ ಅಲ್ಲದೇ, ಕಳೆದ ತಿಂಗಳು ಪ್ರವಾಹ ಪೀಡಿತ ಪ್ರದೇಶದ ಸುಮಾರು 20 ರಿಂದ 30 ಅಧಿಕಾರಿಗಳನ್ನು ಗಲ್ಲಿಗೇರಿಸಲಾಗಿತ್ತು ಎಂದು ಕೂಡ ವರದಿಯಾಗಿದೆ. ಉತ್ತರ ಕೊರಿಯಾ ದೇಶದೊಳಗಿನ ಬೆಳವಣಿಗೆಗಳನ್ನು ಗೌಪ್ಯವಾಗಿಡುತ್ತದೆ. ಹೀಗಾಗಿ, ಅಧಿಕಾರಿಗಳ ಗಲ್ಲಿಗೇರಿಸುವ ವಿವರಗಳನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ. ಚೀನಾದ ಗಡಿಯ ಸಮೀಪವಿರುವ ಚಗಾಂಗ್ ಪ್ರಾಂತ್ಯವನ್ನು ಅಪ್ಪಳಿಸಿದ ವಿನಾಶಕಾರಿ ಪ್ರವಾಹದ ನಂತರ, ಅಧಿಕಾರಿಗಳನ್ನು ಕಟ್ಟುನಿಟ್ಟಾಗಿ ಶಿಕ್ಷಿಸಲು ಕಿಮ್ ಜಾಂಗ್ ಉನ್ ಆದೇಶಿಸಿದ್ದಾರೆ. ಪರಿಣಾಮ ಈಗ ಅಧಿಕಾರಿಗಳನ್ನು ಗಲ್ಲಿಗೆ ಏರಿಸಲಾಗಿದೆ.