ಕುರಿಗಾಹಿಯನ್ನ ಹೆದರಿಸಿ ದೊಡ್ಡಿಯಲ್ಲಿದ್ದ 30 ಕುರಿ ಕದ್ದೊಯ್ದ ಖದೀಮರು

1 min read

ಕುರಿಗಾಹಿಯನ್ನ ಹೆದರಿಸಿ ದೊಡ್ಡಿಯಲ್ಲಿದ್ದ 30 ಕುರಿ ಕದ್ದೊಯ್ದ ಖದೀಮರು

ರಾತ್ರೋರಾತ್ರಿ ಕುರಿದೊಡ್ಡಿಗೆ ಎಂಟ್ರಿ ಕೊಟ್ಟು ಮೂವತ್ತು ಕುರಿ   ಗಳನ್ನು ಖದೀಮರು ಕದ್ದುಕೊಂಡು ಹೋಗಿರುವಂತಹ ಘಟನೆ  ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ತಾಂಡಾದಲ್ಲಿ ನಡೆದಿದೆ.  ಕುರಿಗಾಹಿ ಭೀಮಪ್ಪ ಲಮಾಣಿ ಎನ್ನುವವರಿಗೆ ಕುರಿಗಳು ಸೇರಿದ್ದು, ಖದೀಮರ ಕೈಚಳಕಕ್ಕೆ ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ.

ಭೀಮಪ್ಪ ಎಂಬುವವರು   ವಿಕಲಚೇತನನಾಗಿದ್ರೂ ಕುರಿಗಳನ್ನು ಸಾಕಿಕೊಂಡು ಕುಟುಂಬವನ್ನ ಸಾಗಿಸ್ತಿದ್ರು. ಕುರಿದೊಡ್ಡಿಯಲ್ಲಿ ಮಲಗಿದ್ದವನನ್ನು ಹೆದರಿಸಿ ಐವರು ಕಳ್ಳರ ಗ್ಯಾಂಗ್ ಕುರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಕುರಿದೊಡ್ಡಿಯಲ್ಲಿದ್ದ ಕುರಿಗಳನ್ನು ಬೊಲೆರೋ ವಾಹನದಲ್ಲಿ ಹಾಕಿಕೊಂಡು ಹೋಗಿದ್ದಾರೆ. ಕುರಿಮರಿಗಳನ್ನ ಕಳೆದುಕೊಂಡು  ಕುರಿಗಾಹಿ ಕಣ್ಣೀರು ಹಾಕುತ್ತಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

30 sheeps stolen after threatening the shepherd at Haveri

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd