ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗ ಬಾಲಿವುಡ್ ನಟಿ…
ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ಬಾಲಿವುಡ್ ಚಿತ್ರ ಸಿಯಾ ಸಿನಿಮಾದ ನಟಿ ಮತ್ತು ರೂಪದರ್ಶಿ ಆಕಾಂಕ್ಷಾ ಮೋಹನ್ ಮುಂಬೈನ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 30 ವರ್ಷದ ನಟಿ ಮತ್ತು ರೂಪದರ್ಶಿಯ ಶವ ಹೋಟೆಲ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮುಂಬೈ ನ ವರ್ಸೋವಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹೋಟೆಲ್ ಕೊಠಡಿಯಿಂದ ಪೊಲೀಸರು ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ.
ಡೆತ್ ನೋಟ್ ನಲ್ಲಿ ‘ಕ್ಷಮಿಸಿ, ಇದಕ್ಕೆ ಯಾರೂ ಹೊಣೆಗಾರರಲ್ಲ. ಯಾರಿಗೂ ತೊಂದರೆ ಕೊಡಬೇಡಿ. ನಾನು ಸಂತೋಷವಾಗಿಲ್ಲ, ಶಾಂತಿಯನ್ನು ಬಯಸುತ್ತೇನೆ ಎಂದು ಪತ್ರ ಬರೆದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ವರ್ಸೋವಾ ಪೊಲೀಸರು ಎಡಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ತಮಿಳಿನ ‘9 ಥಿರದರ್ಗಳ್’ ಸಿನಿಮಾದ ಮೂಲಕ ಕಾಲಿವುಡ್ ಸಿನಿ ಪ್ರಪಂಚಕ್ಕೆ ಕಾಲಿಟ್ಟಿದ್ದ ಆಕಾಂಕ್ಷಾ ಮೋಹನ್, ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
30 Year Old Model Akanksha Mohan Died Hanging From A Fan Found Suicide Note Reveals Shocking Truth