ನೀರವ್ ಮೋದಿಯ 330 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
ಹೊಸದಿಲ್ಲಿ, ಜುಲೈ 9: ಸಾವಿರಾರು ಕೋಟಿ ರೂಪಾಯಿ ವಂಚಿಸಿ ತಲೆ ಮರೆಸಿಕೊಂಡಿದ್ದ ಆಭರಣ ವ್ಯಾಪಾರಿ ನೀರವ್ ಮೋದಿಯವರ ಮುಂಬೈ, ಲಂಡನ್ ಮತ್ತು ಯುಎಇಗಳಲ್ಲಿನ ಫ್ಲ್ಯಾಟ್ಗಳು ಸೇರಿದಂತೆ 330 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ವಶಪಡಿಸಿಕೊಂಡಿದೆ. ಈ ಹಿಂದೆ ತನಿಖಾ ಸಂಸ್ಥೆ ನೀರವ್ ಮೋದಿಯ 2,348 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ವಶಕ್ಕೆ ಪಡೆದಿತ್ತು.
ಮುಂಬೈನ ವರ್ಲಿಯ ಸಮುದ್ರ ಮಹಲ್ ನಲ್ಲಿನ ಫ್ಲಾಟ್ಗಳು, ಮಹಾರಾಷ್ಟ್ರ ಅಲಿಬಾಗ್ನ ಸಮುದ್ರದ ಪಕ್ಕದ ಫಾರ್ಮ್ ಹೌಸ್, ರಾಜಸ್ಥಾನದ ಜೈಸಲ್ಮೇರ್ನಲ್ಲಿ ವಿಂಡ್ ಮಿಲ್, ಲಂಡನ್ನ ಫ್ಲಾಟ್ ಮತ್ತು ಯುಎಇಯ ಫ್ಲಾಟ್ಗಳನ್ನು ಈಗ ಮುಟ್ಟುಗೋಲು ಹಾಕಿಕೊಂಡಿವೆ. ವಜ್ರದ ವ್ಯಾಪಾರಿ ನೀರವ್ ಮೋದಿಯ ಉಳಿದ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ.
ನೀರವ್ ಮೋದಿ ಮೇಲೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ 2 ಬಿಲಿಯನ್ ಡಾಲರ್(14 ಸಾವಿರದ 997 ಕೋಟಿ 91 ಲಕ್ಷ ರೂ.) ವಂಚನೆ ಮಾಡಿದ ಆರೋಪವಿದೆ