ನವದೆಹಲಿ: ಸರಿಸುಮಾರು 37 ವರ್ಷಗಳ ಹಿಂದಿನ ಮಾತು. ಅಂದು ಜೂನ್ 25. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಟ್ಟ ದಿನ. ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಎಂದೂ ಮರೆಯಲಾಗದ ದಿನ.
1983ರ ಜೂನ್ 25ರಂದು ಭಾರತ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಸಲ ವಿಶ್ವಕಪ್ ಗೆದ್ದ ಐತಿಹಾಸಿಕ ಸಾಧನೆ ಮಾಡಿತ್ತು. ಮೊದಲ ಎರಡು (1975, 1979ರ) ಟೂರ್ನಿಗಳಲ್ಲಿ ಚಾಂಪಿಯನ್ ಎನಿಸಿದ್ದ ವೆಸ್ಟ್ ಇಂಡೀಸ್ ಸತತ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿತ್ತು. ಆದರೆ, ವೆಸ್ಟ್ ಇಂಡೀಸ್ ತಂಡದ ಕನಸನ್ನು ಕಪಿಲ್ ದೇವ್ ನೇತೃತ್ವದ ಭಾರತ ನುಚ್ಚುನೂರು ಮಾಡಿತ್ತು.
ಇಂಗ್ಲೆಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ವೆಸ್ಟ್ ವಿಂಡೀಸ್ ತಂಡವನ್ನು 43 ರನ್‌ಗಳಿಂದ ಮಣಿಸಿ ಟ್ರೋಫಿ ಎತ್ತಿಹಿಡಿಯುವ ಮೂಲಕ ಭಾರತೀಯ ಕನಸು ನನಸು ಮಾಡಿತ್ತು.
ಮೊದಲು ಬ್ಯಾಟ್ ಮಾಡಿದ ಭಾರತ ಪರ ಎಸ್. ಶ್ರೀಕಾಂತ್(38), ಮೋಹಿಂದರ್ ಅಮರ್‌ನಾಥ್(26), ಸಂದೀಪ್ ಪಾಟಿಲ್27 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲರಾಗಿದ್ದರು. ಸುನೀಲ್ ಗಾವಸ್ಕರ್ (2) ಹಾಗೂ ನಾಯಕ ಕಪಿಲ್‌ದೇವ್ 15 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.
ಹೀಗಾಗಿ ಭಾರತ 54.4 ಓವರ್‌ಗಳಲ್ಲಿ ಕೇವಲ 183 ರನ್ ಗಳಿಸಿ ಆಲ್ ಔಟ್ ಆಗಿತ್ತು. 183 ರನ್ ಗಳ ಗುರಿ ಬೆನ್ನತ್ತಿದ್ದ ವೆಸ್ಟ್ ವಿಂಡೀಸ್, ಭಾರತದ ಸಂಘಟಿತ ದಾಳಿ ಎದುರು ಕಂಗೆಟ್ಟಿತ್ತು. ಮದನ್ ಲಾಲ್ 12 ಓವರ್‌ಗಳಲ್ಲಿ 31 ರನ್ ನೀಡಿ ಮೂರು ವಿಕೆಟ್ ಕಿತ್ತರೆ, ಅಮರ್‌ನಾಥ್ 7 ಓವರ್‌ಗಳಲ್ಲಿ ಕೇವಲ 12ರನ್ ನೀಡಿ 3 ವಿಕೆಟ್ ಉರುಳಿಸಿದ್ದರು. ಉಳಿದಂತೆ ಬಲ್ವಿಂದರ್ ಸಂದು 2 ಮತ್ತು ಕಪಿಲ್, ರೋಜರ್ ಬಿನ್ನಿ ತಲಾ ಒಂದೊAದು ವಿಕೆಟ್ ಹಂಚಿಕೊAಡಿದ್ದರು.
ಹೀಗಾಗಿ ಕ್ಲೆöÊವ್ ಲಾಯ್ಡ್ ಬಳಗ 52 ಓವರ್‌ಗಳಲ್ಲಿ 140 ರನ್ ಗಳಿಸಿ ಆಲೌಟ್ ಆಗಿತ್ತು. ಆಲ್‌ರೌಂಡರ್ ಪ್ರದರ್ಶನ ನೀಡಿದ್ದ ಅಮರ್‌ನಾಥ್ (26 ರನ್ ಹಾಗೂ 12ಕ್ಕೆ 3) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಪಿಲ್‌ದೇವ್ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹೀರೋ ಆದರು. ಅಂದಿನಿAದ ಭಾರತದಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆಯಾಗಿ ಬೆಳೆಯಿತು.