ಕಾರ್ಗಿಲ್ ನಲ್ಲಿ 4.2 ತೀವ್ರತೆಯ ಭೂಕಂಪ earthquake saaksha tv
ಲಡಾಖ್ : ಕಾರ್ಗಿಲ್ ನಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.2ರಷ್ಟಿದೆ.
ಇಂದು ಬೆಳಿಗ್ಗೆ 9.16ರ ಸುಮಾರಿಗೆ ಭೂಮಿ ಕಂಪಿಸಿದ್ದು, ಘಟನೆಯಲ್ಲಿ ಯಾವುದೇ ರೀತಿಯ ಸಾವು-ನೋವುಗಳು ಸಂಭವಿಸಿಲ್ಲ.
ಅಲ್ಚಿ (ಲೇಹ್) ನೈಋತ್ಯದಲ್ಲಿ 89 ಕಿ.ಮೀ. ದೂರದಲ್ಲಿ 5 ಕಿ.ಮೀ. ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ.