ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ರೆಮ್ಡಿಸಿವಿರ್ ಔಷಧ..!
ಬೆಂಗಳೂರು : ಕೊರೊನಾ ಎರಡನೇ ಅಲೆ ದೇಶದಲ್ಲಿ ಅಬ್ಬರಿಸಲು ಶುರು ಮಾಡಿದ್ದಾಗಿನಿಂದಲೂ ರೆಮ್ ಡಿಸಿವಿಆರ್ ಚುಚ್ಚುಮದ್ದಿಗೆ ಭಾರಿ ಬೇಡಿಕೆ ಉದ್ಬವವಾಗಿದೆ.
ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ರೆಮ್ ಡಿಸಿವಿಆರ್ ಚುಚ್ಚುಮದ್ದನ್ನು ಹಂಚಿಕೆ ಮಾಡುತ್ತಿದೆ. ಅದರಂತೆ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ ರೆಮ್ ಡಿಸಿವಿರ್ ಚುಚ್ಚುಮದ್ದಿನ 23 ಲಕ್ಷ ವಯಲ್ಸ್ ಹಂಚಿಕೆ ಮಾಡಿದೆ.
ಅದರಲ್ಲಿ ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ಒದಗಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟನೆ ಹೊರಡಿಸಿರುವ ಅವರು, ಏಪ್ರಿಲ್ 21ರಿಂದ ಇದುವರೆಗೆ ಒಟ್ಟು 76 ಲಕ್ಷ ವಯಲ್ಸ್ ರೆಮ್ಡಿಸಿವಿರ್ ಔಷಧ ಹಂಚಿಕೆ ಮಾಡಿದ್ದೇವೆ.
ರಾಜ್ಯಕ್ಕೆ 10 ಲಕ್ಷ ವಯಲ್ಸ್ ದೊರೆತಿದೆ. ಮಹಾರಾಷ್ಟ್ರದ (14.92 ಲಕ್ಷ) ನಂತರ ಅತಿ ಹೆಚ್ಚು ರೆಮ್ ಡಿಸಿವಿರ್ ಪಡೆದ ರಾಜ್ಯ ಕರ್ನಾಟಕವಾಗಿದೆ. ಆದರೆ ಈ ಬಾರಿ ಕರ್ನಾಟಕ ಎಲ್ಲ ರಾಜ್ಯಗಳಿಗಿಂತ ಹೆಚ್ಚು ರೆಮ್ ಡಿಸಿವಿರ್ ಪಡೆದಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆಯಯನ್ನು ಆಧರಿಸಿ ಔಷಧ ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ನಮಗೆ ಈ ಬಾರಿ ಹೆಚ್ಚಿನ ಸಂಖ್ಯೆಯ ರೆಮ್ ಡಿಸಿವಿರ್ ಹಂಚಿಕೆಯಾಗಿದೆ ಎಂದು ತಿಳಿಸಿದ್ದಾರೆ.