‘ಯೋಗಿ ರಾಜ್ಯ’ದಲ್ಲಿ 4 ವರ್ಷದಲ್ಲಿ 4 ಲಕ್ಷ ಮಂದಿಗೆ ಉದ್ಯೋಗ..!

1 min read
job

‘ಯೋಗಿ ರಾಜ್ಯ’ದಲ್ಲಿ 4 ವರ್ಷದಲ್ಲಿ 4 ಲಕ್ಷ ಮಂದಿಗೆ ಉದ್ಯೋಗ..!

ಉತ್ತರಪ್ರದೇಶ: ಕಳೆದ 4 ವರ್ಷದಲ್ಲಿ ಉತ್ತರ ಪ್ರದೇಶ ಸರ್ಕಾರ 4 ಲಕ್ಷ ಮಂದಿಗೆ ಉದ್ಯೋಗ ನೀಡಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸರ್ಕಾರದ ಸಾಧನೆಯ ಬಗ್ಗೆ ಹೇಳಿಕೊಂಡಿದ್ಧಾರೆ.

ಹೌದು ಈ ಸರ್ಕಾರದ 4 ವರ್ಷಗಳ ಅವಧಿಯಲ್ಲಿ ಒಟ್ಟು 4 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶ ಲೋಕಸೇವಾ ಆಯೋಗ ಜಾತಿ, ಪ್ರಾದೇಶಿಕತೆ, ಅಭಿಪ್ರಾಯ ಹಾಗೂ ವಿವಿಧ ಧರ್ಮಗಳನ್ನು ಆಧರಿಸಿ ನೇಮಕಾತಿ ಮಾಡುತ್ತಿದ್ದು, ಅದರಲ್ಲಿ ಸಾಕಷ್ಟು ದುರುಪಯೋಗಗಳಾಗುತ್ತಿದ್ದವು, ಹಣ ಮತ್ತು ತೋಳ್ಬಲದ ಪ್ರಭಾವ ನಡೆಯುತ್ತಿತ್ತು. ಪಾರದರ್ಶಕತೆ ಮತ್ತು ಪಾವಿತ್ರತಾ ನೇಮಕಾತಿಗಳು ನಗೆಪಾಟಲಿಗೀಡಾಗಿದ್ದವು ಎಂದು ಹೇಳಿದ್ದಾರೆ.

 job

ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಾರದರ್ಶಕತೆ ಪಾಲನೆ ಮಾಡಿ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಮಾಡಲಾಗುತ್ತಿದೆ.

ಭ್ರಷ್ಟಾಚಾರದ ವಿರುದ್ಧ ದೂರುಗಳು ಕೇಳಿ ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಪರಿಣಾಮ ಯಾವ ಯುವಕರೂ ಅವಕಾಶ ವಂಚಿತರಾಗುತ್ತಿಲ್ಲ. ಭ್ರಷ್ಟಾಚಾರ ಕಡಿಮೆಯಾಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd