ಕೊರೊನಾದಿಂದ ಭಾರತದಲ್ಲಿ 47 ಲಕ್ಷ ಮಂದಿ ಸಾವು : WHO
ನವದೆಹಲಿ: ಭಾರತದಲ್ಲಿ ಕೊರೊನಾದಿಂದ 47 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ಅಂಕಿ ಅಂಶಗಳಲ್ಲಿ ತಿಳಿಸಿದೆ.
ಈ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸರ್ಕಾರದ ಅಂಕಿ-ಅಂಶಕ್ಕಿಂತಲೂ 10 ಪಟ್ಟು ಹೆಚ್ಚು ಮರಣ ಪ್ರಕರಣಗಳು ದಾಖಲಿಸಲಾಗಿದೆ. ಆದರೆ ಕೇಂದ್ರ ಸರಕಾರ ಕೊರೊನಾ ಸಾವುಗಳಿಗೆ ಸಂಬಂಧಿಸಿದ ಡಬ್ಲ್ಯೂಎಚ್‌ಒ ವರದಿಯನ್ನು ಕೇಂದ್ರ ಸರ್ಕಾರ ಆಕ್ಷೇಪಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಮರಣ ಪ್ರಮಾಣವನ್ನು ಅಂದಾಜಿಸಲು ಡಬ್ಲ್ಯೂಎಚ್‌ಒ ಅನುಸರಿಸಿರುವ ಮಾದರಿ ಹಾಗೂ ಅಂಕಿ-ಅಂಶಗಳ ಸಂಗ್ರಹ ಕ್ರಮವು ಪ್ರಶ್ನಾರ್ಹವಾಗಿದೆ. ಅಲ್ಲದೆ, ಸಾವಿಗಳಿಗೆ ಸಂಬಂಧಿಸಿದಂತೆ ನಾಗರಿಕ ನೋಂದಣಿ ವ್ಯವಸ್ಥೆಯಡಿ (CRS) ಅಧಿಕೃತ, ವಿಶ್ವಾಸನೀಯ ಅಂಕಿ ಅಂಶಗಳು ಲಭ್ಯವಿವೆ. ಹೀಗಾಗಿ, ಹೆಚ್ಚುವರಿ ಸಾವುಗಳನ್ನು ಬಿಂಬಿಸುವ ಮಾದರಿಯನ್ನು ಅನುಸರಿಸಬಾರದು ಎಂದು ಹೇಳಿದೆ.
Excess mortality is calculated as the difference between the number of deaths that have occurred & the number that would be expected in the absence of the #COVID19 pandemic https://t.co/KgFlnthP5e #HealthData pic.twitter.com/Lgd9dw8x3P
— World Health Organization (WHO) (@WHO) May 5, 2022
ಜನವರಿ 2020ರಿಂದ ಡಿಸೆಂಬರ್ 2021ರ ವರೆಗೂ ಭಾರತದಾದ್ಯಂತ ಕೊರೊನಾ ಕಾರಣದಿಂದ ಸಾವಿಗೀಡಾದವರ ಸಂಖ್ಯೆ 47,40,894 ಮುಟ್ಟಿತ್ತು. ಆರೋಗ್ಯ ಇಲಾಖೆಯ ದಾಖಲೆಯ ಪ್ರಕಾರ 2021ರ ಅಂತ್ಯಕ್ಕೆ ಸುಮಾರು 4,81,000 ಪ್ರಕರಣ ದಾಖಲಾಗಿತ್ತು. ಪ್ರಸ್ತುತ ದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,23,000 ದಾಟಿದೆ.
ಜಗತ್ತಿನಾದ್ಯಂತ ಎರಡು ವರ್ಷಗಳಲ್ಲಿ ಕೋವಿಡ್ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸುಮಾರು 1.5 ಕೋಟಿ ಮಂದಿ ಮೃತಪಟ್ಟಿದ್ದಾರೆ ಎಂದು WHO ವರದಿ ಹೇಳಿದೆ.