ನಾಲ್ಕನೇ ಟಿ 20 ಪಂದ್ಯ | ಟೀಂ ಇಂಡಿಯಾ ಗೆಲುವಿನ ಕಾರಣವಾದ ಅಂಶಗಳು..!
1 min read
ನಾಲ್ಕನೇ ಟಿ 20 ಪಂದ್ಯ | ಟೀಂ ಇಂಡಿಯಾ ಗೆಲುವಿನ ಕಾರಣವಾದ ಅಂಶಗಳು..!
ಅಹಮದಾಬಾದ್ : ನರೇಂದ್ರ ಮೋದಿ ಮೈದಾನದಲ್ಲಿ ನಡೆದ ನಾಲ್ಕನೇ ಟಿ 20 ಪಂದ್ಯದಲ್ಲಿ ಭಾರತ 8 ರನ್ ಗಳ ರೋಚಕ ಜಯ ಸಾಧಿಸಿದೆ.. ಈ ಮೂಲಕ ಐದು ಮ್ಯಾಚ್ ಗಳ ಸರಣಿಯಲ್ಲಿ 2-2 ಅಂತರದಲ್ಲಿ ಸಮಬಲ ಸಾಧಿಸಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಟಿ20 ಪಂದ್ಯದ ಟಾಸ್ಕ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರವನ್ನ ಸಮರ್ಥಿಸಿಕೊಳ್ಳುವಂತೆ ಇಂಗ್ಲೆಂಡ್ ಬೌಲರ್ ಗಳು ಆರಂಭದಲ್ಲೇ ಇಂಡಿಯಾಗೆ ಶಾಕ್ ನೀಡಿದ್ರು. 12 ರನ್ ಗಳಿಸಿದ್ದ ರೋಹಿತ್ ಜೋಫ್ರಾ ಆರ್ಚರ್ ಗೆ ಬಲಿಯಾದ್ರು.
ಕೆ.ಎಲ್ ರಾಹುಲ್ ಆಟ 14 ರನ್ ಗಳಿಗೆ ಸೀಮಿತವಾಯಿತು. ಕಳೆದ ಎರಡು ಮ್ಯಾಚ್ ಗಳಲ್ಲಿ ಮಿಂಚಿದ್ದ ನಾಯಕ ವಿರಾಟ್ ಬಂದಷ್ಟೆ ವೇಗದಲ್ಲಿ ಪೆವಿಲೀಯನ್ ಸೇರಿಕೊಂಡರು. ಈ ಸಂಕಷ್ಟದಲ್ಲಿ ಭಾರತಕ್ಕೆ ನೆರವಾಗಿದ್ದು, ಎರಡನೇ ಅಂತಾರಾಷ್ಟ್ರೀಯ ಟಿ 20 ಪಂದ್ಯವಾಡುತ್ತಿದ್ದ ಸೂರ್ಯಕುಮಾರ್ ಯಾದವ್..!
ಹೌದು..!
ಸಂಕಷ್ಟದ ಸ್ಥಿತಿಯಲ್ಲಿ ಕ್ರೀಸ್ ಗೆ ಕಚ್ಚಿನಿಂತ ಯಾದವ್ ಆಂಗ್ಲರ ಎದುರು ಕೆಚ್ಚೆದೆಯ ಆಟವಾಡಿದ್ರು. ರಿಷಬ್ ಪಂತ್ ಜೊತೆಗೂಡಿ 4ನೇ ವಿಕೆಟ್ ಗೆ 48 ರನ್(28 ಬಾಲ್) ಸಿಡಿಸಿ ತಂಡಕ್ಕೆ ಚೇತರಿಕೆಯ ಜೊತೆಯಾಟವಾಡಿದರು. ಪಂತ್ 30 ರನ್ ಸಿಡಿಸಿ ಔಟ್ ಆದರು. ಆದರೆ ಇನ್ನೊಂದು ಕಡೆಯಲ್ಲಿ ಬ್ಯಾಟಿಂಗ್ ಮುಂದುವರಿಸಿದ ಸೂರ್ಯಕುಮಾರ್ ಯಾದವ್ 57 ರನ್ ಮೊದಲ ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 37 ರನ್ ಬಾರಿಸಿ ಔಟ್ ಆದರು ಅಂತಿಮವಾಗಿ ಭಾರತ ತಂಡ 20 ಒವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 185 ರನ್ ಕಳೆಹಾಕಿತು.
ಗೆಲುವಿನ 186 ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಭುವನೇಶ್ವರ್ ಕುಮಾರ್ ಆರಂಭಿಕ ಆಘಾತ ನೀಡಿದ್ರು. ಕಳೆದ ಮ್ಯಾಚ್ ನಲ್ಲಿ ಮಿಂಚಿದ್ದ ಬಟ್ಲರ್ ಗೆ ಬೇಗ ಪೆವಿಲಿಯನ್ ದಾರಿ ತೀರಿಸಿದ್ರು. ನಂತರ ಬಂದ ಡೇವಿಡ್ ಮಲಾನ್ 14 ರನ್ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಒಂದಾದ ಜೇಸನ್ ರಾಯ್ ಮತ್ತು ಬೆನ್ ಸ್ಟೋಕ್ಸ್ ಭಾರತದ ಬೌಲರ್ ಗಳನ್ನ ಕಾಡಿದ್ರು. ಒಂದು ಹಂತದಲ್ಲಿ ಪಂದ್ಯವನ್ನ ಭಾರತದ ಕೈಯಿಂದ ಕಿತ್ತುಕೊಂಡಿದ್ದರು. ಈ ವೇಳೆ ದಾಳಿಗೆ ಬಂದ ಶರ್ದೂಲ್ ಠಾಕೂರ್ ಇಂಗ್ಲೆಂಡ್ ಓಟಕ್ಕೆ ಬ್ರೇಕ್ ಹಾಕಿದ್ರು. ನಂತ್ರ ಕ್ರೀಸ್ ಗೆ ಬಂದ ಮಾರ್ಗನ್ ಗೂ ಶರ್ದೂಲ್ ಕಂಟಕವಾದ್ರು. ಇದು ಮತ್ತೆ ಮ್ಯಾಚ್ ಭಾರತದತ್ತ ವಾಲುವಂತೆ ಮಾಡಿತು. ಕೊನೆಯಲ್ಲಿ ಗೆಲುವಿಗಾಗಿ ಹೋರಾಡಿದ ಜೋಫ್ರಾ ಆರ್ಚರ್ 18 ರನ್ ಬಾರಿಸಿದರು ಕೂಡ ಅಂತಿಮವಾಗಿ ನಿಗದಿತ ಒªರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿ 8 ರನ್ ಗಳ ಅಂತರದಲ್ಲಿ ಇಂಗ್ಲೆಂಡ್ ಸೋಲು ಒಪ್ಪಿಕೊಂಡಿತು.
ಬ್ಯಾಟಿಂಗ್ ನಲ್ಲಿ ಸೂರ್ಯಕುಮಾರ್ ಯಾದವ್ ಮಿಂಚು, ಬೌಲಿಂಗ್ ನಲ್ಲಿ ನಿರ್ಣಾಯಕ ಹಂತದಲ್ಲಿ ಶರ್ದೂಲ್ ಠಾಕೂರ್ ಪ್ರದರ್ಶನ ಭಾರತದ ಗೆಲುವಿಗೆ ಪ್ರಮುಖ ಕಾರಣಗಳಾಗಿವೆ.