24 ಗಂಟೆಯಲ್ಲಿ 5 ಕಾಂಗ್ರೆಸ್ ಶಾಸಕರು ರಾಜೀನಾಮೆ : ರಮೇಶ್ ಜಾರಕಿಹೊಳಿ
ಬೆಳಗಾವಿ : 24 ಗಂಟೆಗಳಲ್ಲಿ 5 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ದೇಶದಲ್ಲಿ ಮಹಿಳೆಯರಿಗೆ ದೇವರು ಎನ್ನುವ ಭಾವನೆ ಇದೆ.
ರಾಜಕೀಯವಾಗಿ ಮಾತ್ರ ವಿರೋಧ, ವೈಯಕ್ತಿಕ ಟೀಕೆ ಬೇಡ ಎಂದು ಹೆಸರು ಹೇಳದೇ ಲಕ್ಷ್ಮ ಹೆಬ್ಬಾಳ್ಕರ್ ಅವರಿಗೆ ಟಾಂಗ್ ನೀಡಿದರು.
ಇನ್ನು ಬಿಜೆಪಿಗೆ ಬಂದ 17 ಶಾಸಕರು ಎಲ್ಲರೂ ಸಂತೋಷದಿಂದ ಇದ್ದಾರೆ. ಸಿದ್ದರಾಮಯ್ಯ ಜೊತೆಗೆ ಇಂದಿಗೂ ನಮ್ಮ ಸಂಬಂಧ ಚನ್ನಾಗಿದೆ.
ಯಾರು ವಾಪಸ್ ಕಾಂಗ್ರೆಸ್ ಗೆ ಹೋಗುವ ಪ್ರಯತ್ನ ಇಲ್ಲ. 24 ಗಂಟೆಯಲ್ಲಿ ಕಾಂಗ್ರೆಸ್ 5 ಶಾಸಕರು ರಾಜೀನಾಮೆ ನೀಡಲು ಸಿದ್ದರಿದ್ದಾರೆ. ಯಾರು ನಂಬಲು ಸಾಧ್ಯವೇ ಇಲ್ಲಂದಹ ಐದು ಹೆಸರು ನಮ್ಮ ಬಳಿ ಇವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಜಿ ಶಾಸಕ ಸಂಜಯ ಪಾಟೀಲ್ ಕ್ಷಮೆ ಕೊರುತ್ತೇನೆ. ಈ ಹಿಂದೆ ಕಾಂಗ್ರೆಸ್ ಮಂತ್ರಿಯಾಗಿ ಕೆಲಸ ಮಾಡಿದ್ದೇವೆ. ಮುಂದಿನ ದಿನದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಯತ್ನ ಮಾಡುತ್ತೇನೆ.
ಗ್ರಾಮೀಣದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿ ಗೆಲ್ಲಿಸಬೇಕು. ಈ ಬಗ್ಗೆ ದೇವರಲ್ಲಿ ನಾನು ಪ್ರತಿಜ್ಞೆ ಮಾಡಿದ್ದೇನೆ. ಶಾಸಕರು ಗೆದ್ದ ಒಂದೇ ಗಂಟೆಯಲ್ಲಿ ಏನ್ ಮಾಡಿದ್ದಾರೆ ಎಂಬುದು ರಾಜ್ಯಕ್ಕೆ ಗೊತ್ತು.
23 ಗ್ರಾಪಂ ಅಧ್ಯಕ್ಷರು ಸಮಾರಂಭಕ್ಕೆ ಬಂದಿದ್ದಾರೆ. ಇನ್ನೂ ಕೆಲವರು ಬರ್ತಿನಿ ಅಂತ ಫೋನ್ ಮಾಡಿದ್ರು. ಆದರೇ ಪಕ್ಕ ಮಾಡಿಕೊಂಡು ಬರುವಂತೆ ಹೇಳಿದ್ದೇನೆ. ಗ್ರಾಪಂ ಮತ ಏಣಿಕೆ ಮುಗಿಯುವ ಮೊದಲೇ ರಮೇಶ ಜಾರಕಿಹೊಳಿಗೆ ಮುಖಭಂಗ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದರು. ಇದರಿಂದ ಶಕ್ತಿ ಪ್ರದರ್ಶನ ಮಾಡಲು ಸಭೆ ಕರೆಯಲಾಗಿದೆ.
ಗ್ರಾಮೀಣದಲ್ಲಿ ಕಾಂಗ್ರೆಸ್ ನಲ್ಲಿ ಇರೋ ಕಾರ್ಯಕರ್ತರು ನಮ್ಮವರು. 60 ಸಾವಿರ ಲಿಡ್ ನಲ್ಲಿ ಮುಂದಿನ ಸಲ ಬಿಜೆಪಿ ಗೆಲ್ಲಿಸಬೇಕು ಎಂದು ಕರೆ ಕೊಟ್ಟರು.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









