ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಕ್ಕಿ ವಿತರಿಸುವ ಕುರಿತು ಮಾತನಾಡಿದ್ದಾರೆ. ನಾವು ಈ ಹಿಂದೆ ಜುಲೈ 1 ರಿಂದ ಅಕ್ಕಿ ವಿತರಿಸುತ್ತೇವೆ ಎಂದು ಹೇಳಿದ್ದೇವು. ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ. ಕೇಂದ್ರ ಐದು, ನಾವು ಐದು ಕೆಜಿ ಕೊಡಬೇಕಾಗಿತ್ತು. ಆದರೆ, ರಾಜ್ಯದ ಬಳಿ ಅಕ್ಕಿ ದಾಸ್ತಾನು ಇಲ್ಲ.
ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರವು ದ್ವೇಷ ರಾಜಕಾರಣ ಮಾಡುತ್ತಿದೆ. ಹೀಗಾಗಿ ಅಕ್ಕಿ ಸಿಗುವವರೆಗೂ 5 ಕೆಜಿ ಅಕ್ಕಿ ನೀಡಿ, ಇನ್ನುಳಿದ ಐದು ಕೆಜಿಗೆ ಅಂದರೆ ಕೆಜಿಗೆ 34 ರೂ. ನಂತೆ ನೀಡುತ್ತೇವೆ. ಹಣ ನೇರವಾಗಿ ಅವರ ಅಕೌಂಟ್ ಗೆ ಹಾಕುತ್ತೇವೆ. ಅಕ್ಕಿ ಸಿಗುವವರೆಗೂ 5 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪಾರದರ್ಶಕವಾಗಿ ಟೆಂಡರ್ ಕರೆದು ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದಾರೆ.








