ಮುಂಬಯಿ: ಯುಪಿಐ (UPI) ಮೂಲಕ ಇನ್ನು ಮುಂದೆ 5 ಲಕ್ಷ ರೂ.ವರೆಗೆ ಹಣ ವರ್ಗಾವಣೆ ಮಾಡಬಹುದು ಎಂದು ಆರ್ ಬಿಐ ಹೇಳಿದೆ.
ಇಲ್ಲಿಯವರೆಗೆ ಒಂದು ಬಾರಿಗೆ ಗರಿಷ್ಟ 1 ಲಕ್ಷ ರೂ.ವರೆಗೆ ಹಣವನ್ನು ಯುಪಿಐ ಮೂಲಕ ವರ್ಗಾವಣೆ ಮಾಡಲು ಅವಕಾಶವಿತ್ತು. ಆದರೆ, ಇನ್ನು ಮುಂದೆ 5 ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನ (RBI) ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಗವರ್ನರ್ ಶಕ್ತಿಕಾಂತ್ ದಾಸ್, 5 ಲಕ್ಷ ರೂ. ವರೆಗೆ ಹಣವನ್ನು ವರ್ಗಾವಣೆ ಮಾಡಬಹುದು ಎಂದು ಹೇಳಿದ್ದಾರೆ.
ಆಹಾರ ಹಣದುಬ್ಬರ ಇಳಿಕೆಯಾಗದ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ಆರ್ ಬಿಐ ಸತತ ಒಂಬತ್ತನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ರೆಪೊ ದರವನ್ನು ಶೇ. 6.5 ರಲ್ಲಿಯೇ ಕಾಯ್ದುಕೊಳ್ಳುವ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.