ಬೆಂಗಳೂರು : ರೈತರಿಗೆ ನೀಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಿದ್ದ ಹಾಲು ಒಕ್ಕೂಟವು ಈಗ ಸಿಎಂ ನಿರ್ದೇಶನದ ಮೇರೆಗೆ ಪ್ರೋತ್ಸಾಹ ಧನ ನೀಡುವುದಕ್ಕೆ ಮುಂದಾಗಿದೆ.
ಅಲ್ಲದೇ, ಹಾಲು ಒಕ್ಕೂಟವು ಸರ್ಕಾರಕ್ಕೆ ಕಂಡೀಷನ್ ಹಾಕಿದೆ. ಹಾಲಿನ ದರ (Milk Price) ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಹಾಲು ಒಕ್ಕೂಟಗಳು ನಷ್ಟದ ಕಾರಣಕ್ಕೆ ಎರಡು ತಿಂಗಳಿಂದ ರೈತರಿಗೆ ನೀಡುತ್ತಿದ್ದ ಸಹಾಯಧನ ನಿಲ್ಲಿಸಲು ತಯಾರಾಗಿದ್ದವು. ರೋಧ ವ್ಯಕ್ತವಾಗುತ್ತಿದ್ದಂತೆ ಸಿಎಂ (Siddaramaiah) ಸೂಚನೆಯ ಮೇರೆಗೆ ಕಡಿತಗೊಳಿಸಿದ ದರವನ್ನು ಮತ್ತೆ ನೀಡಲು ಒಕ್ಕೂಟಗಳು ಮುಂದಾಗಿವೆ.
ಕೆಎಂಎಫ್ ಪ್ರತಿ ನಿತ್ಯವೂ 16 ಲಕ್ಷ ರೂ. ನಷ್ಟದಲ್ಲಿದ್ದು, ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಳಕ್ಕೆ ಮನವಿ ಮಾಡಲು ನಿರ್ಧರಿಸಿದೆ.
ರೈತರ ಏಳಿಗೆ ಹಾಗೂ ನಂದಿನಿ ನಷ್ಟದ ಹಾದಿಯಲ್ಲಿದೆ ಇರುವುದು ಸದ್ಯ ರಾಜ್ಯಕ್ಕೆ ಶಾಕಿಂಗ್ ಸುದ್ದಿಯಾಗಿದ್ದು, ಇನ್ನೊಂದೆಡೆ ಗ್ರಾಹಕರಿಗೂ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕಿದೆ.








