ಏಪ್ರಿಲ್ 1 ರ ಹಣಕಾಸು ವರ್ಷದದಿಂದ ಬದಲಾಗಲಿವೆ ಈ ನಿಯಮಗಳು
ಮಾರ್ಚ್ 21 2022 ಕ್ಕೆ ಹಣಕಾಸು ವರ್ಷ ಮುಕ್ತಾಯವಾಗಿದೆ. ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದ್ದು ಹಲವಾರು ನಿಯಮಗಳು ಬದಲಾಗುವ ಸಾಧ್ಯತೆ ಇದೆ. ಏಪ್ರಿಲ್ 1 ರಿಂದ ಸರ್ಕಾರದ ಕೆಲ ನಿಯಮಗಳು ಮತ್ತು ಬ್ಯಾಂಕ್ ಗಳ ನಿಯಮಗಳಲ್ಲಿವ ಬದಲಾವಣೆ ತರಲಾಗಿದೆ.
ಪ್ಯಾನ್ – ಆಧಾರ್ ಲಿಂಕ್
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ಕೊನೆಯ ದಿನಾಂಕ 31 ಮಾರ್ಚ್ 2022. ನಿಗದಿತ ದಿನಾಂಕದೊಳಗೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಹಣಕಾಸಿನ ವಹಿವಾಟುಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ನೀವು 10 ಸಾವಿರ ರೂಪಾಯಿಗಳ ದಂಡವನ್ನು ಸಹ ಪಾವತಿಸಬೇಕಾಗಬಹುದು.
ಕೆ ವೈ ಸಿ
ಹೆಚ್ಚುತ್ತಿರುವ Omicron ಕಾರಣದಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ , ಬ್ಯಾಂಕ್ ಖಾತೆಗಳಲ್ಲಿ KYC ನವೀಕರಿಸುವ ಕೊನೆಯ ದಿನಾಂಕವನ್ನು 31 ಡಿಸೆಂಬರ್ 2021 ರಿಂದ 31 ಮಾರ್ಚ್ 2022 ರವರೆಗೆ ವಿಸ್ತರಿಸಿತ್ತು. ಇದುವರೆಗೆ KYC ಮಾಡಿಸದ ಗ್ರಾಹಕರು ಮಾರ್ಚ್ 31 ರ ಒಳಗಾ ಗಿ KYC ಯನ್ನ ನವೀಕರಿಸಬೇಕು, ಇಲ್ಲದಿದ್ದರೆ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಔಷಧಿ
ಅಗತ್ಯ ಔಷಧಿಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ ಸೋಂಕು ಹಾಗೂ ನೋವು ನಿವಾರಕಗಳು ಸೇರಿದಂತೆ ಸುಮಾರು 800 ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆ ಏರಿಕೆ ಆಗಲಿದೆ.
ಆಕ್ಸಿಸ್, ಪಂಜಾಬ್ ಬ್ಯಾಂಕ್ ರೂಲ್ಸ್
ಏಪ್ರಿಲ್ 1, 2022 ರಿಂದ ಆಕ್ಸಿಸ್ ಬ್ಯಾಂಕ್‌ನ ಸಂಬಳ ಅಥವಾ ಉಳಿತಾಯ ಖಾತೆಯಲ್ಲಿ ನಿಯಮಗಳು ಬದಲಾಗಲಿವೆ. ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮಿತಿಯನ್ನು 10 ಸಾವಿರದಿಂದ 12 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದೆ. ಅದೇ ಸಮಯದಲ್ಲಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಏಪ್ರಿಲ್‌ನಲ್ಲಿ PPS ಅನ್ನು ಜಾರಿಗೊಳಿಸುತ್ತಿದೆ. 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳಿಗೆ ಏಪ್ರಿಲ್ 4 ರಿಂದ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ.