ADVERTISEMENT
Tuesday, April 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ನನ್ನ ಕಣ್ಣೀರು ಹರ್ಭಜನ್ ಪಾಲಿಗೆ ಬ್ಯುಸಿನೆಸ್ : ಭಜೀ ಜೊತೆಗಿನ ಸ್ನೇಹಕ್ಕೆ ಎಳ್ಳುನೀರು ಬಿಟ್ಟ ಶ್ರೀಶಾಂತ್ ; ಹರ್ಭಜನ್ ಸಿಂಗ್ ವಿರುದ್ಧ ಸಿಡಿದೆದ್ದ ಕೇರಳ ಎಕ್ಸ್‌ಪ್ರೆಸ್

Shwetha by Shwetha
April 26, 2026
in ಕ್ರಿಕೆಟ್, National, Newsbeat, ದೇಶ - ವಿದೇಶ
xr:d:DAFLmKxjjnQ:431,j:46288774527,t:23050212

xr:d:DAFLmKxjjnQ:431,j:46288774527,t:23050212

Share on FacebookShare on TwitterShare on WhatsappShare on Telegram

ಐಪಿಎಲ್ ಇತಿಹಾಸದ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾದ 2008ರ ಕಪಾಳಮೋಕ್ಷ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸುಮಾರು 16 ವರ್ಷಗಳ ನಂತರ ಮಾಜಿ ವೇಗಿ ಶ್ರೀಶಾಂತ್ ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದು, ಹರ್ಭಜನ್ ಸಿಂಗ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಮೂಲಕ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಗೆಳೆತನದ ಮುಖವಾಡ ಕಳಚಿದ ಶ್ರೀಶಾಂತ್

Related posts

ಹರಿಹರ ಪಂಚಮಸಾಲಿ ಪೀಠದಲ್ಲಿ ಭಾರೀ ಹೈಡ್ರಾಮಾ, ಗಲಾಟೆ-ಹಲ್ಲೆ

ಹರಿಹರ ಪಂಚಮಸಾಲಿ ಪೀಠದಲ್ಲಿ ಭಾರೀ ಹೈಡ್ರಾಮಾ, ಗಲಾಟೆ-ಹಲ್ಲೆ

April 28, 2026
ಮೋದಿಗೆ ಮತ ಹಾಕಬೇಡಿ ಅಂದಿದ್ರು ಬಾಲಿವುಡ್ ಸ್ಟಾರ್ಸ್: ಆ ಕರಾಳ ದಿನಗಳ ಕಹಿಸತ್ಯ ಬಿಚ್ಚಿಟ್ಟ ನಟ ಅನುಪಮ್ ಖೇರ್

ಮೋದಿಗೆ ಮತ ಹಾಕಬೇಡಿ ಅಂದಿದ್ರು ಬಾಲಿವುಡ್ ಸ್ಟಾರ್ಸ್: ಆ ಕರಾಳ ದಿನಗಳ ಕಹಿಸತ್ಯ ಬಿಚ್ಚಿಟ್ಟ ನಟ ಅನುಪಮ್ ಖೇರ್

April 28, 2026

ಈವರೆಗೆ ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ನಡುವೆ ಎಲ್ಲವೂ ಸರಿ ಇದೆ ಎಂದೇ ಭಾವಿಸಲಾಗಿತ್ತು. ಆದರೆ ಈಗ ಶ್ರೀಶಾಂತ್ ನೀಡಿರುವ ಹೇಳಿಕೆ ಹಳೆಯ ಗಾಯವನ್ನು ಮತ್ತೆ ಕೆದಕಿದೆ. ಹರ್ಭಜನ್ ಸಿಂಗ್ ಅವರು ಅಂದು ನಡೆದ ಘಟನೆಯನ್ನು ಸಾರ್ವಜನಿಕವಾಗಿ ಬಳಸಿಕೊಂಡು ಹಣ ಗಳಿಸುತ್ತಿದ್ದಾರೆ ಎಂದು ಶ್ರೀಶಾಂತ್ ಕಿಡಿಕಾರಿದ್ದಾರೆ. ಹರ್ಭಜನ್ ಅವರನ್ನು ನಾನು ನನ್ನ ಹಿರಿಯ ಸಹೋದರ ಎಂದು ಗೌರವಿಸಿದ್ದೆ, ಆದರೆ ಅವರು ಈ ಘಟನೆಯನ್ನು ವೈಭವೀಕರಿಸಿ ಬ್ಯುಸಿನೆಸ್ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಥೆ ಹೇಳಿ ಲಕ್ಷಾಂತರ ರೂಪಾಯಿ ಸಂಪಾದನೆ

ಮಾತೃಭೂಮಿ ಮಾಧ್ಯಮದೊಂದಿಗೆ ಮಾತನಾಡಿರುವ ಶ್ರೀಶಾಂತ್, ಹರ್ಭಜನ್ ಸಿಂಗ್ ಅವರು ವಿವಿಧ ಸಂದರ್ಶನಗಳು ಮತ್ತು ಕಾರ್ಯಕ್ರಮಗಳಲ್ಲಿ ಈ ಕಪಾಳಮೋಕ್ಷದ ಬಗ್ಗೆ ಮಾತನಾಡಿ ಸುಮಾರು 80 ಲಕ್ಷದಿಂದ 1 ಕೋಟಿ ರೂಪಾಯಿಯವರೆಗೆ ಹಣ ಗಳಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಇಷ್ಟು ದಿನ ಹರ್ಭಜನ್ ಅವರು ಸಾರ್ವಜನಿಕವಾಗಿ ಕೇಳಿದ ಕ್ಷಮೆಯಾಚನೆ ಕೇವಲ ನಟನೆ ಮತ್ತು ಪ್ರಚಾರದ ಭಾಗವಾಗಿತ್ತು ಎಂಬುದು ಶ್ರೀಶಾಂತ್ ಅವರ ವಾದವಾಗಿದೆ.

ಇನ್ನು ಮುಂದೆ ಯಾವುದೇ ಸಂಬಂಧವಿಲ್ಲ

ಈ ಘಟನೆಯಿಂದ ತಮಗೆ ಅತೀವ ನೋವಾಗಿದ್ದು, ಹರ್ಭಜನ್ ಸಿಂಗ್ ಜೊತೆಗಿನ ಎಲ್ಲಾ ಸ್ನೇಹ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ಶ್ರೀಶಾಂತ್ ಸ್ಪಷ್ಟಪಡಿಸಿದ್ದಾರೆ. ತಮ್ಮ ನೋವನ್ನು ಹರ್ಭಜನ್ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಅವರ ಮಾತುಗಳಲ್ಲಿ ಪ್ರಾಮಾಣಿಕತೆ ಇಲ್ಲ, ಕೇವಲ ಸ್ವಂತ ಲಾಭಕ್ಕಾಗಿ ಅವರು ಈ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಹರ್ಭಜನ್ ಅವರ ಪಶ್ಚಾತ್ತಾಪದ ಮಾತುಗಳು ಕೇವಲ ವ್ಯಾಪಾರೀಕರಣದ ಭಾಗವಾಗಿದೆ ಎಂಬುದು ಅವರ ಮುಖ್ಯ ಆರೋಪವಾಗಿದೆ.

ವಿವಾದದ ಹಿನ್ನೆಲೆ ಏನು?

2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಆವೃತ್ತಿಯ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ನಂತರ ಹರ್ಭಜನ್ ಸಿಂಗ್ ಅವರು ಶ್ರೀಶಾಂತ್ ಕೆನ್ನೆಗೆ ಬಾರಿಸಿದ್ದರು. ಈ ವೇಳೆ ಶ್ರೀಶಾಂತ್ ಮೈದಾನದಲ್ಲೇ ಕಣ್ಣೀರಿಟ್ಟ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದವು. ಇತ್ತೀಚೆಗಷ್ಟೇ ಹರ್ಭಜನ್ ಸಿಂಗ್ ಅವರು ಸಂದರ್ಶನವೊಂದರಲ್ಲಿ ಶ್ರೀಶಾಂತ್ ಮಗಳ ಬಗ್ಗೆ ಮಾತನಾಡಿದ್ದರು. ಅದರ ಬೆನ್ನಲ್ಲೇ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಈ ಘಟನೆಯ ವಿಡಿಯೋ ಹಂಚಿಕೊಂಡಿದ್ದು ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ಇಷ್ಟು ದಿನ ಈ ಬಗ್ಗೆ ತುಟಿಪಿಟಿಕ್ ಅನ್ನದ ಶ್ರೀಶಾಂತ್ ಈಗ ಸಿಡಿದೆದ್ದಿದ್ದಾರೆ. ಈ ಹೊಸ ಬೆಳವಣಿಗೆಯು ಭಾರತೀಯ ಕ್ರಿಕೆಟ್‌ನ ಇಬ್ಬರು ಮಾಜಿ ಆಟಗಾರರ ನಡುವಿನ ಮುನಿಸನ್ನು ಮತ್ತೆ ಬೀದಿಗೆ ತಂದಿದೆ.

ShareTweetSendShare
Join us on:

Related Posts

ಹರಿಹರ ಪಂಚಮಸಾಲಿ ಪೀಠದಲ್ಲಿ ಭಾರೀ ಹೈಡ್ರಾಮಾ, ಗಲಾಟೆ-ಹಲ್ಲೆ

ಹರಿಹರ ಪಂಚಮಸಾಲಿ ಪೀಠದಲ್ಲಿ ಭಾರೀ ಹೈಡ್ರಾಮಾ, ಗಲಾಟೆ-ಹಲ್ಲೆ

by Shwetha
April 28, 2026
0

ಹರಿಹರದ ಪಂಚಮಸಾಲಿ ಪೀಠದಲ್ಲಿ ಇಂದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಭೆಯ ವೇಳೆ ಭಾರೀ ಗಲಾಟೆ ನಡೆದಿದೆ. ಪೀಠದ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ ಲೆಕ್ಕ ಮಂಡಿಸುವ...

ಮೋದಿಗೆ ಮತ ಹಾಕಬೇಡಿ ಅಂದಿದ್ರು ಬಾಲಿವುಡ್ ಸ್ಟಾರ್ಸ್: ಆ ಕರಾಳ ದಿನಗಳ ಕಹಿಸತ್ಯ ಬಿಚ್ಚಿಟ್ಟ ನಟ ಅನುಪಮ್ ಖೇರ್

ಮೋದಿಗೆ ಮತ ಹಾಕಬೇಡಿ ಅಂದಿದ್ರು ಬಾಲಿವುಡ್ ಸ್ಟಾರ್ಸ್: ಆ ಕರಾಳ ದಿನಗಳ ಕಹಿಸತ್ಯ ಬಿಚ್ಚಿಟ್ಟ ನಟ ಅನುಪಮ್ ಖೇರ್

by Shwetha
April 28, 2026
0

ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಲಿವುಡ್ ಚಿತ್ರರಂಗದ ನಡುವೆ ಇಂದು ಅತ್ಯಂತ ಆತ್ಮೀಯ ಬಾಂಧವ್ಯವಿದೆ. ದೇಶದ ಅಭಿವೃದ್ಧಿ ಕಾರ್ಯಗಳು, ಸ್ವಚ್ಛ ಭಾರತ್ ಅಭಿಯಾನ ಅಥವಾ ಚಲನಚಿತ್ರರಂಗದ ಸಮಸ್ಯೆಗಳೇ...

ಕಾಂಗ್ರೆಸ್ ಸರ್ಕಾರಕ್ಕೆ ನಡುಕ ತಂದ ಕುಮಾರಸ್ವಾಮಿ ಹೇಳಿಕೆ 50 ಶಾಸಕರಿಂದ ದಿಲ್ಲಿ ಚಲೋ ಸಿದ್ಧತೆ

ಕಾಂಗ್ರೆಸ್ ಸರ್ಕಾರಕ್ಕೆ ನಡುಕ ತಂದ ಕುಮಾರಸ್ವಾಮಿ ಹೇಳಿಕೆ 50 ಶಾಸಕರಿಂದ ದಿಲ್ಲಿ ಚಲೋ ಸಿದ್ಧತೆ

by Shwetha
April 28, 2026
0

ಮಾಲೂರು ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶದ ಮಳೆ ಸುರಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಂಚಲನ...

ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ರಾಜ್ಯಪಾಲ

ಡಿ. ಸುಧಾಕರ್ ಆರೋಗ್ಯ ವಿಚಾರಿಸಿದ ರಾಜ್ಯಪಾಲ

by Shwetha
April 28, 2026
0

ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (28-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 28, 2026
0

ದಿನ ಭವಿಷ್ಯ : 28-04-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಮಂಗಳನ ಪ್ರಭಾವ ಹೆಚ್ಚಾಗಿರುತ್ತದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಕೋಪದ ಮೇಲೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram