5 ಸುಲಭ , ರುಚಿಕರ , ಆರೋಗ್ಯಕರ ಸಾರು , ಗೊಜ್ಜು , ಗ್ರೇವಿ ರೆಸಿಪಿಗಳು..!
1. ಹಾಗಲಕಾಯಿ ಕಾಯಿರಸ
ಬೇಕಾಗುವ ಸಾಮಗ್ರಿಗಳು
ಹಾಗಲಕಾಯಿ – 4
ಕಡಲೆ ಬೇಳೆ – 2 ಚಮಚ
ಉದ್ದಿನಬೇಳೆ – 1 ಚಮಚ
ಕಪ್ಪು ಎಳ್ಳು – 2 ಚಮಚ
ಕಾಯಿತುರಿ/ಒಣಕೊಬ್ಬರಿ – 4 ಚಮಚ
ಮೆಂತೆ – 1/4 ಚಮಚ
ಒಣಮೆಣಸಿನಕಾಯಿ – 5
ಹುಣಸೆ ರಸ – 1 ಕಪ್
ಬೆಲ್ಲ – 1/2 ಕಪ್
ಒಗ್ಗರಣೆಗೆ
ಸಾಸಿವೆ – 1/2 ಚಮಚ
ಎಣ್ಣೆ – 1 ಚಮಚ
ಮಾಡುವ ವಿಧಾನ
ಮೊದಲಿಗೆ ಹಾಗಲಕಾಯಿಗಳನ್ನು ಚಿಕ್ಕದಾಗಿ ಹೆಚ್ಚಿ ತೊಳೆದು 1/2 ಚಮಚ ಅರಿಶಿನ, 1 ಚಮಚ ಕಲ್ಲು ಉಪ್ಪು ಬೆರೆಸಿ 30 ನಿಮಿಷಗಳ ಕಾಲ ನೆನೆಸಿಡಿ.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಕಡಲೆ ಬೇಳೆ, ಉದ್ದಿನಬೇಳೆ, ಕಪ್ಪು ಎಳ್ಳು, ಕಾಯಿತುರಿ/ಒಣಕೊಬ್ಬರಿ, ಮೆಂತೆ ಮತ್ತು ಒಣಮೆಣಸಿನಕಾಯಿಗಳನ್ನು ಹುರಿದು, ತಣ್ಣಗಾದ ಬಳಿಕ ರುಬ್ಬಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಹಾಗಲಕಾಯಿ ಸೇರಿಸಿ ಹುರಿಯಬೇಕು. ನಂತರ ಇದಕ್ಕೆ ಹುಣಸೆ ರಸ, ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಒಂದು ಕುದಿ ಬರಿಸಿ. ನಂತರ ರುಬ್ಬಿದ ಮಸಾಲೆ ಸೇರಿಸಿ, ಅಗತ್ಯವಿರುವಷ್ಟು ನೀರು ಹಾಕಿ ಮತ್ತೊಮ್ಮೆ ಕುದಿಸಿದರೆ ಹಾಗಲಕಾಯಿ ಕಾಯಿರಸ ಸವಿಯಲು ರೆಡಿ.
2. ಅನಾನಸ್ ಹಣ್ಣಿನ ಗೊಜ್ಜು
ಬೇಕಾಗುವ ಪದಾರ್ಥಗಳು
ಅನಾನಸ್ – 1/2 ಹಣ್ಣು
ಮೆಣಸು – 8-10
ಕಡಲೆ ಬೇಳೆ- 2 ಚಮಚ
ಉದ್ದಿನ ಬೇಳೆ -2 ಚಮಚ
ಎಳ್ಳು -2 ಚಮಚ
ಮೆಂತೆ- 1/4 ಚಮಚ
ಸಾಸಿವೆ- 1/2 ಚಮಚ
ಎಣ್ಣೆ- ಒಗ್ಗರಣೆಗೆ ಸ್ವಲ್ಪ
ಕೊಬ್ಬರಿ ತುರಿ- 2 ಚಮಚ
ಬೆಲ್ಲ – 1 ತುಂಡು
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ – ಸ್ವಲ್ಪ
ಮಾಡುವ ವಿಧಾನ
ಮೊದಲು ಅನಾನಸ್ ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಕತ್ತರಿಸಿ ಇಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ, ಮೆಂತ್ಯ, ಬ್ಯಾಡಗಿ ಮೆಣಸು, ಎಳ್ಳು, ಕೊಬ್ಬರಿ ತುರಿ ಸೇರಿಸಿ ಹುರಿಯಿರಿ.
ಅದು ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ. ಈಗ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಅರಿಶಿನ ಮತ್ತು ಅನಾನಸ್ ಹೋಳುಗಳನ್ನು ಹಾಕಿ ಸ್ವಲ್ಪ ಹುರಿದು ನಂತರ ನೀರು ಹಾಕಿ ಬೇಯಿಸಿಕೊಳ್ಳಿ. ಬಳಿಕ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಒಂದು ಕುದಿ ಬರಿಸಿಕೊಳ್ಳಿ. ಒಂದು ಕುದಿ ಬಂದ ಮೇಲೆ ಅದಕ್ಕೆ ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಈಗ ರುಚಿಯಾದ ಅನಾನಸ್ ಗೊಜ್ಜು ಸವಿಯಲು ಸಿದ್ಧವಾಗಿದೆ.
3 . ಉಡುಪಿ ಶೈಲಿಯ ಮಾವಿನ ಕಾಯಿ ಸಾರು ಅಥವಾ ಅಪ್ಪೆ ಸಾರು
ಬೇಕಾಗುವ ಸಾಮಗ್ರಿಗಳು
ಚಿಕ್ಕದಾಗಿ ಕತ್ತರಿಸಿದ ಮಾವಿನಕಾಯಿ – 1ಕಪ್
ಹಸಿಮೆಣಸು – 3
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 1ಚಮಚ
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಉದ್ದಿನ ಬೇಳೆ – 1/4 ಚಮಚ
ಕೆಂಪುಮೆಣಸು – 1
ಕರಿಬೇವು – 2 ಎಸಳು
ಇಂಗು ಚಿಟಿಕೆಯಷ್ಟು
ಅರಿಶಿನ ಚಿಟಿಕೆಯಷ್ಟು
ಮಾಡುವ ವಿಧಾನ
ಮೊದಲಿಗೆ ಮಾವಿನಕಾಯಿ, ಹಸಿಮೆಣಸಿನಕಾಯಿ, ಉಪ್ಪು ಸೇರಿಸಿ, ಅರ್ಧ ಕಪ್ ನೀರು ಸೇರಿಸಿ ಕುಕ್ಕರ್‌ನಲ್ಲಿ 1 ವಿಸಲ್ ಹೊಡೆಯುವವರೆಗೆ ಬೇಯಿಸಿ. ಅದು ತಣ್ಣಗಾದ ಬಳಿಕ ನಯವಾಗಿ ರುಬ್ಬಿ.
ನಂತರ ಇದನ್ನು ಪಾತ್ರೆಗೆ ವರ್ಗಾಯಿಸಿ. ರುಚಿಗೆ ತಕ್ಕಂತೆ ಉಪ್ಪು (ಬೇಕಿದ್ದರೆ ಸಣ್ಣ ತುಂಡು ಬೆಲ್ಲ) ಮತ್ತು ಸಾಕಷ್ಟು ನೀರು ಸೇರಿಸಿ 2 ನಿಮಿಷ ಕುದಿಸಿ.
ನಂತರ ಪಾನ್ ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಉದ್ದಿನ ಬೇಳೆ, ಜೀರಿಗೆ, ಕರಿಬೇವಿನ ಎಲೆ, ಕೆಂಪು ಮೆಣಸು, ಅರಿಶಿನ, ಇಂಗು ಸೇರಿಸಿ ಒಗ್ಗರಣೆ ಕೊಡಿ.
ಈಗ ಮಾವಿನಕಾಯಿ ರಸಂ ಅಥವಾ ಅಪ್ಪೆ ಸಾರು ಸಿದ್ಧವಾಗಿದೆ.
4. ಅನಾನಸ್ (ಪೈನಾಪಲ್) ಹಣ್ಣಿನ ಗೊಜ್ಜು
ಬೇಕಾಗುವ ಪದಾರ್ಥಗಳು
ಅನಾನಸ್ ಅಥವಾ ಪೈನಾಪಲ್ – 1/2 ಹಣ್ಣು
ಬ್ಯಾಡಗಿ ಮೆಣಸು – 8-10
ಕಡಲೆ ಬೇಳೆ- 2 ಚಮಚ
ಉದ್ದಿನ ಬೇಳೆ -2 ಚಮಚ
ಎಳ್ಳು -2 ಚಮಚ
ಮೆಂತೆ- 1/4 ಚಮಚ
ಸಾಸಿವೆ- 1/2 ಚಮಚ
ಎಣ್ಣೆ- ಒಗ್ಗರಣೆಗೆ ಸ್ವಲ್ಪ
ಕೊಬ್ಬರಿ ತುರಿ- 2 ಚಮಚ
ಬೆಲ್ಲ – 1 ತುಂಡು
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಅನಾನಸ್ ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಹೆಚ್ಚಿ ಪಕ್ಕದಲ್ಲಿ ಇಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಸೇರಿಸಿ. ಸಾಸಿವೆ ಸಿಡಿದ ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ, ಮೆಂತ್ಯ, ಬ್ಯಾಡಗಿ ಮೆಣಸು, ಎಳ್ಳು, ಕೊಬ್ಬರಿ ತುರಿ ಸೇರಿಸಿ ಹುರಿಯಿರಿ.
ಅದು ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ. ಈಗ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಅರಿಶಿನ ಮತ್ತು ಅನಾನಸ್ ಹೋಳುಗಳನ್ನು ಹಾಕಿ ಸ್ವಲ್ಪ ಹುರಿದು ನಂತರ ನೀರು ಹಾಕಿ ಬೇಯಿಸಿಕೊಳ್ಳಿ. ಬಳಿಕ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಒಂದು ಕುದಿ ಬರಿಸಿಕೊಳ್ಳಿ. ಒಂದು ಕುದಿ ಬಂದ ಮೇಲೆ ಅದಕ್ಕೆ ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಈಗ ರುಚಿಯಾದ ಪೈನಾಪಲ್ ಗೊಜ್ಜು ಅನ್ನದ ಜೊತೆಗೆ ಸವಿಯಲು ಸಿದ್ಧವಾಗಿದೆ.
5. ದಾಸವಾಳ ಹೂವಿನ ತಿಳಿ ಸಾರು
ಬೇಕಾಗುವ ಸಾಮಗ್ರಿಗಳು
ಕೆಂಪು ದಾಸವಾಳದ ಎಸಳುಗಳು – 24 ಹೂಗಳು
ಹುಣಸೆ ಹಣ್ಣಿನ ರಸ – 2 ಚಮಚ
ಬೆಲ್ಲ – 1 ಸಣ್ಣ ತುಂಡು
ಜೀರಿಗೆ 1 ಟೇಬಲ್ ಸ್ಪೂನ್
ಕರಿಮೆಣಸು 6
ಧನಿಯಾ 1/2 ಟೇಬಲ್ ಸ್ಪೂನ್
ಮೆಂತೆ 1/4 ಟೇಬಲ್ ಸ್ಪೂನ್
ಇಂಗು ಚಿಟಿಕೆಯಷ್ಟು
ಬ್ಯಾಡಗಿ ಮೆಣಸು 1 ಅಥವಾ 2
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ
ಸಾಸಿವೆ – 1/4 ಟೇಬಲ್ ಸ್ಪೂನ್
ಬೆಳ್ಳುಳ್ಳಿ – 4 ಎಸಳು
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ
ಮಾಡುವ ವಿಧಾನ
ಮೊದಲಿಗೆ ದಾಸವಾಳದ ದಳಗಳನ್ನು ಹೂವಿನಿಂದ ಬೇರ್ಪಡಿಸಿ. ನಂತರ ಅದನ್ನು ತೊಳೆದು ಎರಡು ಲೋಟ ನೀರಿನಲ್ಲಿ ಬೇಯಿಸಿ. ನಂತರ ಆರಲು ಬಿಡಿ. ಈಗ ಬೇಯಿಸಿದ ನೀರಿನಿಂದ ಹೂವಿನ ಎಸಳುಗಳನ್ನು ಬೇರೆ ಮಾಡಿ.
ಒಂದು ಬಾಣಲೆಯಲ್ಲಿ ಜೀರಿಗೆ, ಧನಿಯಾ,ಬ್ಯಾಡಗಿ ಮೆಣಸು, ಕರಿಮೆಣಸು, ಇಂಗು ಮತ್ತು ಮೆಂತೆಯನ್ನು ಎಣ್ಣೆ ಹಾಕದೆ ಹುರಿಯಿರಿ. ಆರಿದ ನಂತರ ಮಿಕ್ಸಿ ಜಾರಿನಲ್ಲಿ ಹಾಕಿ. ಅದರ ಜೊತೆಗೆ ಬೆಂದಿರುವ ದಾಸವಾಳ ಹೂವಿನ ಎಸಳುಗಳನ್ನು ಸೇರಿಸಿ ನುಣ್ಣಗೆ ರುಬ್ಬಿ.
ನಂತರ ಒಂದು ಪಾತ್ರೆಯಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ ಮತ್ತು ದಾಸವಾಳ ಹೂವಿನ ಎಸಳು ಬೇಯಿಸಿದ ನೀರನ್ನು ಸೇರಿಸಿ. ಅದಕ್ಕೆ ಇನ್ನೂ ಎರಡು ಗ್ಲಾಸ್ ನೀರನ್ನು ಸೇರಿಸಿ ಕುದಿಸಿ. ಅದಕ್ಕೆ ಬೆಲ್ಲ, ಹುಣಸೆ ಹಣ್ಣಿನ ರಸ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಕುದಿ ಬಂದ ಬಳಿಕ ಅದಕ್ಕೆ ಸಾಸಿವೆ – ಬೆಳ್ಳುಳ್ಳಿ ಒಗ್ಗರಣೆ ಕೊಡಿ.
ಈಗ ಆರೋಗ್ಯಕರ ರುಚಿಯಾದ ದಾಸವಾಳ ಹೂವಿನ ತಿಳಿಸಾರು ಸಿದ್ಧವಾಗಿದೆ. ಇದನ್ನು ಅನ್ನದ ಜೊತೆ ಸೇವಿಸಬಹುದು ಅಥವಾ ಸೂಪ್ ತರಹ ಕೂಡ ಸೇವಿಸಬಹುದು.