ಕೋಲಾರದಲ್ಲಿ ಪ್ರಸಾದ ಸೇವಿಸಿ 50 ಮಂದಿ ಅಸ್ವಸ್ಥ

1 min read
Kolar saaksha tv

ಕೋಲಾರದಲ್ಲಿ ಪ್ರಸಾದ ಸೇವಿಸಿ 50 ಮಂದಿ ಅಸ್ವಸ್ಥ

ಶ್ರೀನಿವಾಸಪುರ ತಾಲೂಕಿನ ಬೀರಗಾನಹಳ್ಳಿ ಗ್ರಾಮದಲ್ಲಿ ಘಟನೆ

ಗ್ರಾಮದ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಹವನ Kolar saaksha tv

ಕೋಲಾರ : ದೇವಾಲಯದಲ್ಲಿ ನೀಡಿದ್ದ ಪ್ರಸಾದ ಸೇವಿಸಿ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ  ಕೋಲಾರದಲ್ಲಿ ಜರುಗಿದೆ

ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಬೀರಗಾನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಹೊಸ ವರ್ಷಾಚರಣೆ ಹಿನ್ನೆಲೆ ಬೀರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಹವನ ಹಮ್ಮಿಕೊಳ್ಳಲಾಗಿತ್ತು.

 ಈ ಪೂಜೆ ಹಿನ್ನಲೆಯಲ್ಲಿ ದೇವಾಲಯದ ಆಡಳಿ ಮಂಡಳಿ ವತಿಯಿಂದ ಚಿತ್ರಾನ್ನ ಹಾಗೂ ಕೇಸರೀಬಾತ್ ನೀಡಲಾಗಿದೆ.

Kolar saaksha tv

ಪ್ರಸಾದ ಸೇವಿಸಿದ್ದ 12 ಮಕ್ಕಳು ಸೇರಿದಂತೆ  50 ಕ್ಕೂ  ಹೆಚ್ಚು ಮಂದಿಗೆ ತೀವ್ರ ವಾಂತಿಯಿಂದ ಅಸ್ವಸ್ಥಗೊಂಡಿದ್ದಾರೆ.

ಕೂಡಲೇ ಅವರನ್ನು ಆಂಬ್ಯುಲೆನ್ ಸಹಾಯದಿಂದ ಶ್ರೀನಿವಾಸಪುರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲು ಪಡಿಸಿದ್ದಾರೆ.

ಸದ್ಯ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ 12 ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ.

ಇನ್ನು ಘಟನಾ ಸಂಬಂ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ನಡೆಯುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd