ಬೆಂಗಳೂರಿಗರೇ ಎಚ್ಚರ : ನಗರದ ಈ ವಲಯದಲ್ಲಿ ಹೆಚ್ಚು ಸೋಂಕು..!

1 min read
COVID

COVID ಬೆಂಗಳೂರಿಗರೇ ಎಚ್ಚರ : ನಗರದ ಈ ವಲಯದಲ್ಲಿ ಹೆಚ್ಚು ಸೋಂಕು..!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಂತೂ ಪ್ರತಿದಿನ ಕೊರೊನ ಸ್ಫೋಟವಾಗುತ್ತಲೇ ಇದೆ.

ನಗರದಲ್ಲಿ ಒಂದೇ ದಿನ 5,066 ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಮಧ್ಯೆ ಏಪ್ರಿಲ್ 20ರ ವೇಳೆಗೆ ದಿನವೊಂದಕ್ಕೆ 6,500 ಕೇಸ್ ಗಳನ್ನು ದಾಟಬಹುದು ಎಂದು ತಜ್ಞರ ಸಮಿತಿ ಅಂದಾಜಿಸಿದೆ.

COVID

ಇನ್ನು ಬೆಂಗಳೂರು ದಕ್ಷಿಣ ವಲಯದಲ್ಲೇ ಅತಿಹೆಚ್ಚು ಜನರಿಗೆ ಕೋವಿಡ್ ಹರಡಿದೆ ಎಂದು ತಿಳಿದುಬಂದಿದೆ. ಈ ವಲಯದಲ್ಲಿ 983 ಪ್ರಕರಣಗಳು ಕಂಡುಬಂದಿವೆ.

ಪೂರ್ವದಲ್ಲಿ 735, ಪಶ್ಚಿಮದಲ್ಲಿ 635, ಮಹದೇವಪುರ 606, ಆರ್ ಆರ್ ನಗರ 389, ದಾಸರಹಳ್ಳಿ 120, ಬೊಮ್ಮನಹಳ್ಳಿಯಲ್ಲಿ 488 ಕೇಸ್ ಗಳು ದೃಢಪಟ್ಟಿವೆ.

ಮಂಗಳವಾರವೂ ನಗರದಲ್ಲಿ 26 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ನಗರದಲ್ಲಿ ಪಾಸಿಟಿವಿಟಿ ಪ್ರಮಾಣ 5.79% ಕ್ಕೆ ಏರಿಕೆಯಾಗಿದೆ.

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd