ಉತ್ತರಾಖಂಡ್ ನಲ್ಲಿ ಮೇಘಸ್ಫೋಟಕ್ಕೆ 52 ಬಲಿ Uttarakhand saaksha tv
ಡೆಹ್ರಾಡೂನ್ : ಉತ್ತರಾಖಂಡ್ ನಲ್ಲಿ ಭಾರಿ ಮಳೆಗೆ ದಿನದಿಂದ ದಿನಕ್ಕೆ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇಲ್ಲಿ ನಡೆದ ಮೇಘಸ್ಫೋಟಕ್ಕೆ ಈವರೆಗೂ 52 ಮಂದಿ ಪ್ರಾಣಕಳೆದುಕೊಂಡಿದ್ದರೇ 5 ಮಂದಿ ನಾಪತ್ತೆಯಾಗಿದ್ದಾರೆ.
ಉತ್ತರಾಖಂಡ್ ನಲ್ಲಿ ವರುಣ ಅಬ್ಬರಿಸಿ ಬೊಬ್ಬರಿದಿದ್ದು, ಹಲವೆಡೆ ಭೂಕುಸಿತವಾಗಿದೆ.
ಇದರಿಂದಾಗಿ ಗ್ಯಾಂಗ್ಟಾಕ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 10 ಅನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಇತ್ತ ಅಲ್ಮೋಡಾ ಜಿಲ್ಲೆಯಲ್ಲಿ ಭೂಕುಸಿತವಾಗುತ್ತಲೇ ಇರುವುದರಿಂದ ಪ್ರವಾಸಿಗರ ಮತ್ತು ಸ್ಥಳೀಯರ ರಕ್ಷಣಾ ಕಾರ್ಯ ಮುಂದುವರೆದಿದೆ.
ಸದ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯ ಭಾರಿ ವರ್ಷಧಾರೆಗೆ ಉತ್ತರಖಾಂಡ್ ನಲುಗಿ ಹೋಗಿದ್ದು, ನೋಡ ನೋಡ್ತಿದ್ದಂತೆ ರಸ್ತೆಗಳು ಬಿರುಕು ಬಿಡಲಾರಂಭಿಸಿವೆ.
ಜೊತೆಗೆ ಗುಡ್ಡಗಳು ಕುಸಿಯುತ್ತಿವೆ. ಇದರಿಂದಾಗಿ ಪ್ರವಾಸಿಗರು ಅಪಾಯಕ್ಕೆ ಸಿಲುಕಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.