ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಡಾಣಕಶಿರೂರು ಗ್ರಾಮದ 54 ಜನರ ಗಂಟಲು ದ್ರವ ಪರೀಕ್ಷಾ ವರದಿ ಇಂದು ಬರುವ ನಿರೀಕ್ಷೆ ಇದೆ. ಸದ್ಯ ಗರ್ಭಿಣಿ ಕುಟುಂಬದ 9 ಜನರ ವರದಿ ನೆಗೆಟಿವ್ ಬಂದಿದೆ. ಆದ್ರೆ ಈಗಾಗಲೇ ಗರ್ಭಿಣಿ ಸಂಪರ್ಕದಿAದ ಗ್ರಾಮದ 12 ಜನರಿಗೆ ಪಾಜಿಟಿವ್ ದೃಢಪಟ್ಟಿದೆ. ಹೀಗಾಗಿ ಸದ್ಯ 54 ಜನರ ವರದಿಯತ್ತ ಎಲ್ಲರ ಚಿತ್ತನೆಟ್ಟಿದೆ. ಜೊತೆಗೆ ವರದಿ ಏನಾಗಬಹುದು ಎಂಬ ಆತಂಕದಲ್ಲಿ ಗರ್ಭಿಣಿ ಬಯಕೆ ಅಂತ ಊಟಕ್ಕೆ ತೆರಳಿದ್ದ ಡಾಣಕಶಿರೂರ ಗ್ರಾಮಸ್ಥರು ಇದ್ದಾರೆ. ಗರ್ಭಿಣಿ ಹಾಗೂ ಆಕೆಯಿಂದ ಸೊಂಕಿತರ 12 ಜನರ ಕಾಲ್ ಡಿಟೇಲ್ಸ್ ಅನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಸದ್ಯ ಗರ್ಭಿಣಿ ಮೂಲಕ ಸೋಂಕು ಸ್ಪೋಟ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಆದರೆ ಒಳನೋಟದಲ್ಲಿ ಬೇರೆನಾದ್ರೂ ಇದೆಯಾ.? ಗರ್ಭಿಣಿಗೆ ಸೋಂಕು ಬಂದಿದ್ದೇಗೆ? ಗ್ರಾಮಕ್ಕೆ ಹೊರಗಿನಿಂದ ಬಂದವರಿಗೆ ಈ ಮೊದಲೆ ಇತ್ತಾ ಸೋಂಕು? ಗ್ರಾಮಕ್ಕೆ ಇತ್ತೀಚಿಗೆ ಹೊರಗಿನಿಂದ ಬಂದವರು ಯಾರ್ಯಾರು? ಗ್ರಾಮಕ್ಕೆ ಉಡುಪಿ, ಗೋವಾ ಸೇರಿ ವಿವಿಧೆಡೆಯಿಂದ ಬಂದಿದ್ದಾರಾ? ಅನ್ನೋದನ್ನು ಜಿಲ್ಲಾಡಳಿತ ಹುಡುಕಾಡುತ್ತಿದೆ…A
ತಮಿಳುನಾಡು ಸದನದಲ್ಲಿ ಶೂಟೌಟ್ ಧಗಧಗ:ಕರ್ನಾಟಕ ಸರ್ಕಾರಕ್ಕಿಂತ ಹೆಚ್ಚಿನ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ ವಿಜಯ್!
ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನಲ್ಲಿ ನಡೆದ ಮೂವರ ಶೂಟೌಟ್ ಪ್ರಕರಣ ಇದೀಗ ಎರಡು ರಾಜ್ಯಗಳ ನಡುವೆ ತೀವ್ರ ರಾಜಕೀಯ ಹಾಗೂ ಆಡಳಿತಾತ್ಮಕ ಸಂಚಲನ ಮೂಡಿಸಿದೆ. ಸ್ವಾತಂತ್ರ್ಯ...








