ಸಾಲದ ಶೂಲಕ್ಕೆ ಒಂದೇ ಕುಟುಂಬದ ಆರು ಮಂದಿ ಬಲಿ suicide
ಯಾದಗಿರಿ : ಸಾಲ ಬಾಧೆ ತಾಳಲಾರದೇ ಒಂದೇ ಕುಟುಂಬದ ಆರು ಮಂದಿ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭೀಮರಾಯ ಸುರಪುರ (45), ಶಾಂತಮ್ಮ ಸುರಪುರ (36), ಸುಮಿತ್ರಾ (12), ಶ್ರೀದೇವಿ (13), ಶಿವರಾಜ (9), ಲಕ್ಷ್ಮೀ (4) ಮೃತರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಹಾಪುರ ಕ್ರೈಂ ಪಿಎಸ್‍ಐ ಆರ್.ಶಾಮಸುಂದರ ನಾಯಕ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಗ್ನಿ ಶಾಮಕದಳ ಹಾಗೂ ಗ್ರಾಮದ ನುರಿತ ಈಜುಗಾರರಿಂದ ಶವಪತ್ತೆ ಮಾಡಲಾಗಿದೆ.
ಘಟನೆ ಬಗ್ಗೆ ಮಾತನಾಡಿರುವ ಕ್ರೈಂ ಪಿಎಸ್‍ಐ ಆರ್.ಶಾಮಸುಂದರ ನಾಯಕ, ಮೇಲ್ನೋಟಕ್ಕೆ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ತನಿಖೆ ನಂತರ ಸಂತ್ಯಾಂಶ ಹೊರ ಬರಲಿದೆ ಎಂದಿದ್ದಾರೆ.