ಕಲಬುರಗಿ: ಸೆಂಟ್ರಲ್ ಜೈಲಿನಲ್ಲಿ (Kalaburagi jail) ಅಧಿಕಾರಿಗಳನ್ನೇ ಬ್ಲಾಕ್ ಮೇಲ್ ಮಾಡುತ್ತ, ಐಷಾರಾಮಿ ಬದುಕು ಅನುಭವಿಸಲು ಯತ್ನಿಸಿದ ಶಂಕಿತ ಉಗ್ರ ಸೇರಿದಂತೆ 6 ಜನ ಆರೋಪಿಗಳನ್ನು ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಶಂಕಿತ ಉಗ್ರ ಜುಲ್ಫಿಕರ್ ಸೇರಿದಂತೆ 6 ಜನ ಕೈದಿಗಳನ್ನು ಸ್ಥಳಾಂತಿರಸಲು ನಿರ್ಧರಿಸಲಾಗಿದೆ. ಕೈದಿಗಳನ್ನು ರಾಜ್ಯದ ವಿವಿಧ ಜೈಲ್‍ಗಳಿಗೆ ಸ್ಥಳಾಂತರ ಮಾಡಲು ನ್ಯಾಯಾಲಯ ಒಪ್ಪಿಗೆ ನೀಡಿದೆ. ಜುಲ್ಫಿಕರ್ 2013ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಆಗಿದ್ದಾನೆ. ಈತನ ಜೊತೆ ಶಿವಮೊಗ್ಗದ ರೌಡಿಶೀಟರ್ ಬಚ್ಚನ್ ಸೇರಿದಂತೆ 6 ಜನ ವರ್ಗಾವಣೆಗೆ ಇಲಾಖೆ ಮುಂದಾಗಿದೆ.
ಉಗ್ರ ಜುಲ್ಫಿಕರ್ ಬೇರೆ ಜೈಲಿಗೆ ಶಿಫ್ಟ್ ಮಾಡಲು ಎನ್ ಐಎ ಕೋರ್ಟ್ ನ ಅನುಮತಿ ಪಡೆಯಲಾಗಿದೆ. ಶಿವಮೊಗ್ಗ ರೌಡಿ ಶೀಟರ್ ಬಚ್ಚನ್ ಸ್ಥಳಾಂತರಕ್ಕೆ ಶಿವಮೊಗ್ಗ ಕೋರ್ಟ್ ಅನುಮತಿ ನೀಡಿದೆ. ಆರೋಪಿಗಳು ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ಐಷಾರಾಮಿ ಜೀವನಕ್ಕಾಗಿ ಹಲವಾರು ಕುತಂತ್ರಗಳನ್ನು ಮಾಡಿದ್ದರು. ಬ್ಲ್ಯಾಕ್‍ಮೇಲ್ ಮಾಡಿ ಹೈಫೈ ಜೀವನ ನಡೆಸುತ್ತಿದ್ದರು. ಜೈಲಿಗೆ ಹೊಸ ಮುಖ್ಯ ಅಧೀಕ್ಷರು ಬರುತ್ತಿದ್ದಂತೆ ಇವರ ಹೈಫೈ ಲೈಫ್‍ಗೆ ಬ್ರೇಕ್ ಬಿದ್ದಿದೆ.
ಅಲ್ಲದೇ, ಜೈಲು ಅಧೀಕ್ಷಕರ ಕಾರು ಸ್ಫೋಟಿಸುವ ಬೆದರಿಕೆಯನ್ನೂ ಆರೋಪಿಗಳು ಹಾಕಿದ್ದರು.