ಪ್ರತಿಯೊಬ್ಬ ಬೌಲರ್ ಹ್ಯಾಟ್ರಿಕ್ ಮಾಡುವ ಕನಸು ಕಂಡಿರುತ್ತಾರೆ. ಆದರೆ, ಇಲ್ಲೊಬ್ಬ 12 ವರ್ಷದ ಪೋರ ಒಂದೇ ಓವರ್‌ನಲ್ಲಿ ಎರಡರೆಡು ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಮಾಡಿದ್ದಾನೆ.
ಇಂಗ್ಲೆಂಡ್ನಲ್ಲಿ ಈ ದಾಖಲೆ ಸೃಷ್ಟಿಯಾಗಿದ್ದು, 12ರ ಹರೆಯದ ಒಲಿವರ್ ವೈಟ್ಹೌಸ್ ಎಂಬ ಬಾಲ ಈ ದಾಖಲೆ ಮಾಡಿದ್ದಾನೆ. ಇಂಗ್ಲೆಂಡ್ನ ಬ್ರೋಮ್ಸ್‌ಗ್ರೋವ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದಿದ್ದ ವೈಟ್‌ಹೌಸ್, ಕುಕ್ಹಿಲ್ ತಂಡದ ವಿರುದ್ಧ ಆರು ಎಸೆತಗಳಲ್ಲಿ ಆರು ವಿಕೆಟ್ ಉರುಳಿಸಿ ದಾಖಲೆ ಮಾಡಿದ್ದಾನೆ. ಕೇವಲ ಎರಡು ಓವರ್ ಬೌಲ್ ಮಾಡಿದ ವೈಟ್‌ಹೌಸ್, ಒಂದೇ ಒಂದು ರನ್ ನೀಡದೆ ಎಂಟು ವಿಕೆಟ್‌ಗಳನ್ನು ಪಡೆದಿದ್ದಾನೆ.
ವೈಟ್ಹೌಸ್ ಸಾಧನೆಯನ್ನು ಮನಸಾರೆ ಕೊಂಡಾಡಿರುವ ಬ್ರೂಮ್ಸ್‌ಗ್ರೋವ್ ಕ್ರಿಕೆಟ್ ಕ್ಲಬ್ ಮೊದಲ ತಂಡದ ನಾಯಕ ಜೇಡೆನ್ ಲೆವಿಟ್, ವೈಟ್ಹೌಸ್ ಮಾಡಿದ್ದನ್ನು ನಂಬಲು ಸಾಧ್ಯವಾಗುತ್ತಿಲ್ಲ.ಅದು ಎಷ್ಟು ದೊಡ್ಡ ಸಾಧನೆ ಎಂದು ವೈಟ್ಹೌಸ್ಗೆ ತಿಳಿದಿಲ್ಲ, ಆದರೆ ನಂತರ ಅವನು ಅದರ ಮಹತ್ವವನ್ನು ಅರಿತುಕೊಳ್ಳಲ್ಲಿದ್ದಾನೆ ಎಂದಿದ್ದಾರೆ.
ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೈಟ್ಹೌಸ್ ಅವರ ಡಬಲ್ ಹ್ಯಾಟ್ರಿಕ್ ಸಾಧನೆಯನ್ನು ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಕ್ಲಬ್ ಮಾಡಿದ ಪೋಸ್ಟ್ ಕೆಲವೇ ಗಂಟೆಗಳಲ್ಲಿ 45 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದೆ.







