ಬೆಳಗಾವಿ: ಹೊಟ್ಟೆ ನೋವು ತಾಳಲಾರದೆ ಕೊರೊನಾ ಸೋಂಕಿತ 65 ವರ್ಷದ ವೃದ್ಧರೊಬ್ಬರೊಬ್ಬರು ನೆಲದ ಮೇಲೆ ಬೆತ್ತಲೆಯಾಗಿ ನರಳಾಡಿದವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಳಗಾವಿಯ ಜಿಲ್ಲಾ ಆಸ್ಪತ್ರೆ (ಬಿಮ್ಸ್)ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಥಣಿ ತಾಲೂಕಿನ ವೃದ್ಧರೊಬ್ಬರಿಗೆ ಲಿವರ್ ನಲ್ಲಿ ಬಾವು ಕಾಣಿಸಿಕೊಂಡಿತ್ತು. ಅವರನ್ನು ಚಿಕಿತ್ಸೆಗೆಂದು ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಬೆಡ್ ಖಾಲಿ ಇಲ್ಲ ಎಂದು ಕೆಎಲ್‍ಇ ಆಸ್ಪತ್ರೆಯವರು ವಾಪಸ್ ಕಳಿಸಿದ್ದಾರೆ. ಹೀಗಾಗಿ ವೃದ್ಧರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆ ಬಿಮ್ಸ್‍ಗೆ ಶಿಫ್ಟ್ ಮಾಡಲಾಗಿತ್ತು. ಬಿಮ್ಸ್‍ನಲ್ಲಿ ದಾಖಲು ಮಾಡಿಕೊಂಡರೂ ವೈದ್ಯರು, ಬೆಡ್ ಇಲ್ಲದ ಕಾರಣ ಹೇಳಿ ನೆಲದ ಮೇಲೆ ಬಟ್ಟೆ ಹಾಕಿದ ಅದರ ಮೇಲೆ ಮಲಗಿಸಿದ್ದರು. ಮೂರು ದಿನಗಳಿಂದ ವೃದ್ಧ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೈದ್ಯರು ಯಾವುದೇ ಚಿಕಿತ್ಸೆ ನೀಡಿಲ್ಲ ಎಂದು ವೃದ್ಧನ ಕುಟುಂಬಸ್ಥರ ಆರೋಪವಾಗಿದೆ. ಮೂರು ದಿನದ ನಂತರ ವೃದ್ಧನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಹೊಟ್ಟೆ ನೋವಿನಿಂದ ವೃದ್ಧ ಒದ್ದಾಡಿದರೂ, ಬೆತ್ತಲೆಯಾಗಿ ನೆಲದ ಬಿದ್ದು ಒದ್ದಾಡುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿ ಇತ್ತ ನೋಡಿಲ್ಲ ಎಂದು ಆರೋಪಿಸಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ವೃದ್ಧನನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ವೃದ್ಧನ ನರಳಾಟದ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಮ್ಸ್ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ತನಿಖೆಗೆ ಆದೇಶ ನೀಡಿದ್ದಾರೆ. ನಾನು ವಾರದಿಂದ ಕ್ವಾರಂಟೈನ್‍ನಲ್ಲಿದ್ದೆ. ಇಂದು ಕರ್ತವ್ಯಕ್ಕೆ ಹಾಜರಾಗಿದ್ದೇನೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಡಾ.ವಿನಯ್ ತಿಳಿಸಿದ್ದಾರೆ.
ಅಮೆರಿಕದ ವಿಮಾನ ಮಿಸ್ಸಿಂಗ್!
ಅಮೆರಿಕದ ಭಾರೀ ಸೈನಿಕ ವಿಮಾನವಾದ KC-135 ಸ್ಟ್ರಾಟೋಟ್ಯಾಂಕರ್ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಮಾನವು ಗಾಳಿಯಲ್ಲೇ ಇಂಧನ ತುಂಬುವ ಪ್ರಮುಖ ಕಾರ್ಯವನ್ನು ನಿರ್ವಹಿಸುವುದರಿಂದ...








