ಐಪಿಎಲ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.
ಇವರ ಸ್ಫೋಟಕ ಆಟದಿಂದಾಗಿ ಮೊದಲು ಬ್ಯಾಟಿಂಗ್ ಗೆ ಇಳಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಬರೋಬ್ಬರಿ 208 ರನ್ ಗಳಿಸಿದೆ. ಆರಂಭದಲ್ಲಿ ನೈಟ್ ರೈಡರ್ಸ್ ತಂಡ ಕೂಡ ವಿಕೆಟ್ ಗಳು ಬೇಗನೆ ಕಳೆದುಕೊಂಡಿತ್ತು. ಹೀಗಾಗಿ ತಂಡ 100 ರ ಗಡಿ ದಾಟುವುದು ಕೂಡ ಕಷ್ಟ ಎನ್ನಲಾಗುತ್ತಿತ್ತು. ಈ ಸಂದರ್ಭದಲ್ಲಿ ಮೈದಾನಕ್ಕೆ ಇಳಿದ ರಸೆಲ್, ಅಬ್ಬರಿಸಿ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು.
ರಸೆಲ್ ಹಾಗೂ ರಿಂಕು ಸಿಂಗ್ ಹೈದರಾಬಾದ್ ಬೌಲರ್ ಗಳ ಬೆವರಿಳಿಸಿದರು. ರಿಂಕು ಸಿಂಗ್ 15 ಎಸೆತಗಳಲ್ಲಿ 3 ಬೌಂಡರಿ ಸೇರಿದಂತೆ 23 ರನ್ ಗಳಿಸಿದರೆ, ರಸೆಲ್ 25 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 3 ಬೌಂಡರಿ ಸೇರಿದಂತೆ ಅಜೇಯ ಅಜೇಯ 64 ರನ್ ಗಳಿಸಿದರು.
ನೈಟ್ ರೈಡರ್ಸ್ ತಂಡವು ಕೊನೆಯ 5 ಓವರ್ ಗಳಲ್ಲಿ ಬರೋಬ್ಬರಿ 78 ರನ್ ಗಳಿಸಿತು.