ಮನೆ ಕೆಲಸ ಮಾಡದಿದ್ದಕ್ಕೆ 7 ವರ್ಷದ ಬಾಲಕಿಯ ಮೇಲೆ ಬಿಸಿ ನೀರು ಸುರಿದು ಹಲ್ಲೆ…
ಮನೆಗೆಲಸ ಮಾಡದ ಕಾರಣ 7 ವರ್ಷದ ಬಾಲಕಿ ಮೇಲೆ ಬಿಸಿ ನೀರು ಸುರಿದು ಹಲ್ಲೆ ಮಾಡಿರುವ ಘಟನೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗರೆಡ್ಡಿಗುಡೆಂನಲ್ಲಿ ಈ ಘಟನೆ ನಡೆದಿದೆ.
ಕಿರುಕುಳಕ್ಕೆ ಒಳಗಾದ 7 ವರ್ಷದ ಬಾಲಕಿಯನ್ನ ಮಿದುಲಾ ಎಂದು ಗುರುತಿಸಲಗಿದೆ. ಆಕೆಯ ತಂದೆ ಕೆಲ ಸಮಯದ ಹಿಂದೆ ನಿಧನರಾಗಿದ್ದರು. ಬಾಲಕಿಯ ತಾಯಿ ಕುವೈತ್ ನಲ್ಲಿ ಕೆಲಸ ಮಾಡುತ್ತಿರುವ ಕಾರಣ ಸ್ನೇಹಿತೆ ಲಕ್ಷ್ಮಿ ಎಂಬುವವರ ಮನೆಯಲ್ಲಿ ಬಿಟ್ಟು ಹೋಗಿದ್ದಳು.
7 ವರ್ಷದ ಬಾಲಕಿಯ ಮೇಲೆ ಬಿಸಿ ನಿರು ಸುರಿದು ತೀವ್ರ ಗಾಯಗಳಾಗಿವೆ ಎಂದು ಜಂಗರೆಡ್ಡಿಗುಡೆಂನ ಠಾಣಾಧಿಕಾರಿ ಬಾಲ ಸುರೇಶ್ ಮಾಹಿತಿ ನೀಡಿದ್ದಾರೆ. ಬಾಲಕಿಯನ್ನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೋಷಕಿ ಲಕ್ಷ್ಮಿ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ.
ಹುಡುಗಿ ಮನೆಯಿದ ಕಳ್ಳತನ ಮಾಡುತ್ತಿದ್ದಳು ಆದ್ದರಿಂದ ಥಳಿಸಿದ್ದಾಗಿ ಲಕ್ಷ್ಮಿ ಹೇಳಿಕೊಂಡಿದ್ದಾಳೆ..