ಮೊದಲ ಭಾರಿಗೆ iPhone 14 ಗೆ 7000 ರಿಯಾಯಿತಿ – ಇಲ್ಲಿ ಮಾತ್ರ ಲಭ್ಯ…
ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ iPhone 14 ಗೆ ಇದೇ ಮೊದಲ ಭಾರಿಗೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ಐಫೋನ್ 13 ರ ಉತ್ತರಾಧಿಕಾರಿಯಾಗಿ ಬಿಡುಗಡೆಯಾದ ಹೊಸ iPhone 14, ಪ್ರಸ್ತುತ ಕೇವಲ 72,900 ರೂಗಳ ಬ್ಯಾಂಕ್ ರಿಯಾಯಿತಿಯೊಂದಿಗೆ ಲಭ್ಯವಿದೆ.
Jio Mart ಮಾತ್ರ ಲಭ್ಯ
iPhone 14 ಮೂಲ ಬೆಲೆ 79,900 ರೂ.ಗಿಂತ ಕಡಿಮೆಯಾಗಿದೆ. ಹೊಸ ಬೆಲೆ Jio Mart ಆಫ್‌ಲೈನ್ ಸ್ಟೋರ್‌ಗಳಲ್ಲಿ ಮಾತ್ರ ಲಭ್ಯವಿದೆ. ಆದಾಗ್ಯೂ, iPhone 14 ಸರಣಿಯ ಇತರ ಮಾದರಿಗಳಾದ iPhone 14 Plus, iPhone 14 Pro ಮತ್ತು iPhone 14 Pro Max ಮಾಡೆಲ್ ಗಳು ಅವುಗಳ ಮೂಲ ಬೆಲೆಯಲ್ಲಿಯೇ ಲಭ್ಯವಿದೆ. ಈ ಕೊಡುಗೆಯು iPhone 14 ನಲ್ಲಿ ಮಾತ್ರ ಲಭ್ಯವಿದೆ.
iPhone 14 ಆಫರ್
iPhone 14 128GB ಸ್ಟೋರೇಜ್ ಮಾಡೆಲ್ ಮೂಲ ಬೆಲೆ ರೂ 79,900 ಇದೆ.
ಈಗ, Jio Mart ಅದೇ ಮಾಡೆಲ್ ಅನ್ನ ಆಫ್‌ಲೈನ್ ಸ್ಟೋರ್‌ಗಳಲ್ಲಿ 77,900 ರೂಗಳಿಗೆ ಮಾರಾಟ ಮಾಡುತ್ತಿದೆ ಅಂದರೆ ಸಂಪೂರ್ಣ 2000 ರೂ. ರಿಯಾಯಿತಿ ಸಿಗಲಿದೆ. ಇದಲ್ಲದೇ, HDFC ಕ್ರೆಡಿಟ್ ಕಾರ್ಡ್ EMI ಮತ್ತು ಪೂರ್ಣ ಸ್ವೈಪ್ ಮೂಲಕ 5,000 ರೂಪಾಯಿಗಳ ತ್ವರಿತ ಕ್ಯಾಶ್‌ಬ್ಯಾಕ್ ಸಹ ಲಭ್ಯ ವಿದೆ.
ಅಂದರೆ,ಒಟ್ಟು 7,000 ರೂಪಾಯಿ ಉಳಿತಾಯ ಮಾಡಬಹುದು. ಈ ಕೊಡುಗೆಯು Jio Mart ಆಫ್‌ಲೈನ್ ಸ್ಟೋರ್‌ಗಳಲ್ಲಿ ಮಾತ್ರ ಲಭ್ಯವಿದೆ.
7000 discount on iPhone 14 for the first month – only available here…