ಬಿಟ್ ಕಾಯಿನ್ ಪ್ರಕರಣ : ಶ್ರೀಕಿ ಬಗ್ಗೆ ಸ್ಫೋಟಕ ಮಾಹಿತಿ bitcoin saaksha tv
ಬಿಟ್ ಕಾಯಿನ್ ಪ್ರಕರಣದ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ನಾಯಕರು ಕಚ್ಚಾಡುತ್ತಿದ್ದಾರೆ.
ಈ ಮಧ್ಯೆ ಪ್ರಕರಣದ ಆರೋಪಿ ಶ್ರೀಕಿ ಬಗ್ಗೆ ಸ್ಫೋಟಕ ಮಾಹಿತಿ ಒಂದು ಹೊರಬಿದ್ದಿದೆ.
ಹೌದು..! ಶ್ರೀಕಿ ಲ್ಯಾಪ್ ಟಾಪ್ ನಲ್ಲಿ 76 ಲಕ್ಷ ಪ್ರೈವೇಟ್ ಕೀ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಈ ಕೀಗಳನ್ನು ಬಿಟ್ ಕಾಯಿನ್ ಖಾತೆಗೆ ಪ್ರವೇಶಿಸಲು ಬಳಸಲಾಗುತ್ತಿತ್ತಂತೆ ಎಂದು ವಿಧಿ ವಿಜ್ಞಾನ ವಿಶ್ಲೇಷಣಾ ವರದಿಯಲ್ಲಿ ಬಹಿರಂಗವಾಗಿದೆ.
ಇದಲ್ಲದೇ ಶ್ರೀಕಿಯ ಕ್ಲೌಡ್ ಅಕೌಂಟ್ ನಲ್ಲಿ 27 ಇ ವ್ಯಾಲೆಟ್, ಪ್ರೈವೇಟ್ ಕೀ, ವಿಳಾಸಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಶ್ರೀಕಿ ಲಾಪ್ ಟಾಪ್ ಅನ್ನು ಸಿಐಡಿಗೆ ರವಾನೆ ಮಾಡಲಾಗಿದ್ದು, ಸಿಐಡಿ ಸೈಬರ್ ತಜ್ಞರು ಪರಿಶೀಲನೆ ನಡೆಸಲಿದ್ದಾರೆ.









