ಮೀನುಗಾರಿಕಾ ದೋಣಿ ಮುಳುಗಿ ಕನಿಷ್ಠ 79 ಜನರು ಸಾವನ್ನಪ್ಪಿ, ನೂರಾರು ಜನರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ದಕ್ಷಿಣ ಗ್ರೀಸ್‌ನ ಕರಾವಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ಪೆಲೋಪೊನೀಸ್ ಪ್ರದೇಶದ ನೈಋತ್ಯಕ್ಕೆ 75 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಇಲ್ಲಿಯವರೆಗೆ 104 ಜನರನ್ನು ರಕ್ಷಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ ಆದರೆ ಅಧಿಕೃತವಾಗಿ ಇನ್ನೂ ತಿಳಿದುಬಂದಿಲ್ಲ.
79 ಮೃತದೇಹಗಳನ್ನು ಸಮುದ್ರದಿಂದ ತೆಗೆಯಲಾಗಿದೆ ಎಂದು ಗ್ರೀಕ್ ಕೋಸ್ಟ್ ಗಾರ್ಡ್ ತಿಳಿಸಿದೆ, ದೋಣಿಯಲ್ಲಿ ಎಷ್ಟು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 30 ಜನ ಈಜಿಪ್ಟಿನವರು, 10 ಜನ ಪಾಕಿಸ್ತಾನಿಗಳು, 35 ಜನ ಸಿರಿಯನ್ನರು ಹಾಗೂ ಇಬ್ಬರು ಪ್ಯಾಲೇಸ್ಟೀಯನ್ ರು ಬದುಕುಳಿದಿದ್ದಾರೆ ಎನ್ನಲಾಗಿದೆ.








