ಶಿವಮೊಗ್ಗದ ಹೆದ್ದಾರಿಯಲ್ಲಿ ಕಾರು ಡಿಕ್ಕಿ 8 ಎಮ್ಮೆಗಳ ಸಾವು…
ಎಮ್ಮೆಗಳ ಹಿಂಡಿಗೆ ಕಾರು ಡಿಕ್ಕಿಯಾಗಿ 8 ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಹೊರ ವಲಯದಲ್ಲಿ ನಡೆದಿದೆ. ಕಾರು ಚಾಲಕನ ನಿರ್ಲಕ್ಷ್ಯತನದಿಂದ ಎಮ್ಮೆಗಳು ಒದ್ದಾಡಿ ಪ್ರಾನ ಬಿಟ್ಟಿವೆ.
ಗಾಡಿಕೊಪ್ಪದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬ್ರಿಜಾ ಕಾರೊಂದು ರಸ್ತೆ ಪಕ್ಕದಲ್ಲಿ ಸಾಗುತ್ತಿದ್ದ ಎಮ್ಮೆಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಎಮ್ಮೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. 5 ಎಮ್ಮೆಗಳಿಗೆ ಗಾಯಗಳಾಗಿವೆ.
ಗಾಡಿಕೊಪ್ಪದ ನಿವಾಸಿ ಮಂಜುನಾಥ್ ಎಂಬುವರಿಗೆ ಸೇರಿದ ಎಮ್ಮೆಗಳಾಗಿದ್ದು, ನಿನ್ನೆ ರಾತ್ರಿ ಮಲ್ಲಿಗೇನಹಳ್ಳಿ ಕಡೆ ಮೇಯಲು ಹೋಗಿದ್ದ ಎಮ್ಮೆಗಳನ್ನು ಮನೆ ಕಡೆ ಕರೆದುಕೊಂಡು ಬರುವಾಗ ಅಪಘಾತವಾಗಿದೆ. ಕಾರು ವಿದ್ಯಾನಗರದಿಂದ ಸಾಗರ ಕಡೆಗೆ ಹೊರಟಿತ್ತು.
ಅಫಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಯುವಕರು ಕಾರನ್ನ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ. 8 buffaloes killed in car collision on Shimoga Highway…