21 ದಿನದ ಬಾಲಕಿಯ ಹೊಟ್ಟೆಯಲ್ಲಿ 8 ಭ್ರೂಣ ಪತ್ತೆ – ವಿಶ್ವದ ಮೊದಲ ಪ್ರಕರಣ…
ಜಾರ್ಖಂಡ್ ನ ರಾಜಧಾನಿ ರಾಂಚಿಯಲ್ಲಿ ವೈದ್ಯಲೋಕವೇ ಅಚ್ಚರಿ ಪಡೆವ ಸುದ್ಧಿಯೊಂದು ವರದಿಯಾಗಿದೆ. ರಾಂಚಿಯಲ್ಲಿ 21 ದಿನದ ಬಾಲಕಿಯ ಹೊಟ್ಟೆಯಿಂದ ಎಂಟು ಭ್ರೂಣಗಳನ್ನ ಹೊರತೆಗೆಯಲಾಗಿದ್ದು, ಆಪರೇಷನ್ ಮಾಡಿದ ವೈದ್ಯರೇ ಅಚ್ಚರಿ ವ್ಯಕ್ತಿಪಡಿಸಿದ್ದಾರೆ.
ಅಕ್ಟೋಬರ್ 10 ರಂದು ರಾಮಗಢ ನಿವಾಸಿಗಳಿಗೆ ಜನಸಿದ್ದ ಹೆಣ್ಣು ಮಗುವಿನ ಹೊಟ್ಟೆ ಊದಿಕೊಂಡಿತ್ತು. ಮಗುವನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ರಾಣಿ ಮಕ್ಕಳ ಆಸ್ಪತ್ರೆಯ ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಿದಾಗ ಮಗುವಿನ ಹೊಟ್ಟೆಯೊಳಗೆ ಡರ್ಮಟೈಟಿಸ್ ಸಿಸ್ಟ್ ಇರುವುದು ಪತ್ತೆಯಾಗಿದೆ. ಇದರಲ್ಲಿ ದೇಹದ ಕೆಲವು ಜೀವಕೋಶಗಳ ಸಹ ಕಂಡು ಬಂದಿದೆ. ಆಪರೇಷನ್ ನಡೆಸಿ ಹೊರತೆಗೆದಾಸಗ 8 ಭ್ರೂಣಗಳು ಪತ್ತೆಯಾಗಿವೆ.
ಬಾಲಕಿಗೆ ಆಯುಷ್ಮಾನ್ ಭಾರತ್ ಅಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪ್ರಾಥಮಿಕ ಚಿಕಿತ್ಸೆ ನಂತರ ಬಾಲಕಿಯನ್ನ ಡಿಸ್ಚಾರ್ಜ್ ಮಾಡಲಾಗಿದೆ.
ರಾಣಿ ಮಕ್ಕಳ ಆಸ್ಪತ್ರೆಯ ಡಾ.ಇಮ್ರಾನ್ ಮಾತನಾಡಿ, ಹೊಟ್ಟೆಯಿಂದ ಎಂಟು ಭ್ರೂಣಗಳನ್ನು ಹೊರತೆಗೆದಿರುವುದು ವಿಶ್ವದಲ್ಲಿ ಇದೇ ಮೊದಲ ಪ್ರಕರಣವಾಗಿದೆ. ಇದನ್ನು Feet in Fetu ಎನ್ನುತ್ತಾರೆ. ಇದು ಬಹಳ ಅಪರೂಪದ ಸ್ಥಿತಿ. ಪ್ರಪಂಚದಾದ್ಯಂತ 200 ಕ್ಕಿಂತ ಕಡಿಮೆ ಪ್ರಕರಣಗಳು ಕಂಡುಬಂದಿವೆ ಎಂದು ತಿಳಿಸಿದ್ದಾರೆ.
8 embryos found in 21-day-old girl’s stomach – world’s first case