ಬೆಂಗಳೂರಲ್ಲಿ ಇಂದು 8246 ಜನರಲ್ಲಿ ಕೋವಿಡ್ ಪಾಸಿಟಿವ್
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಬ್ಬರ ಮುಂದುವರೆದಿದೆ.
ನಗರದಲ್ಲಿಂದು 8246 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಬೊಮ್ಮನಹಳ್ಳಿ 813 , ದಾಸರಹಳ್ಳಿ 256, ಬೆಂಗಳೂರು ಪೂರ್ವ 1038, ಮಹಾದೇವಪುರ 1410, ಆರ್‍ಆರ್ ನಗರ 595,
ಬೆಂಗಳೂರು ದಕ್ಷಿಣ 798, ಬೆಂಗಳೂರು ಪಶ್ಚಿಮ 626, ಯಲಹಂಕ 605 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.
ನಗರದಲ್ಲಿನ್ನೂ 2,89,131 ಸಕ್ರಿಯ ಪ್ರಕರಣಗಳಿವೆ.
ಇನ್ನು ನಗರದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ 33.83% ಇದ್ದು, ಮರಣ ಪ್ರಮಾಣ 1.26% ಇದೆ.